ಭಟ್ಕಳ: ಬಝ್ಮೆ ಫೈಝೆ ರಸೂಲ್ ಸಂಸ್ಥೆಯಿಂದ ಮಿಲಾದ್ ಮೆರವಣೆಗೆ

ಭಟ್ಕಳ: ಇಲ್ಲಿನ ಬಝ್ಮೆ ಫೈಝೆ ರಸೂಲ್ ಸಂಸ್ಥೆಯಿಂದ ಪ್ರವಾದಿ ಮುಹಮ್ಮದ್ ಪೈಗಂಬರರ ೧೪೯೧ ನೆ ಜನ್ಮಾದಿನಾಚರಣೆ ನಿಮಿತ್ತ ನಗರದ ವಿವಿಧೆಡೆ ಆಕರ್ಷಕ ಮಿಲಾದ್ ಮೆರವಣೆಗೆ ನಡೆಯಿತು. ಈದ್ಗಾ ಮೈದಾನದಿಂದ ಆರಂಭಗೊಂಡ ಮೆರವಣೆಗೆ ಶಮ್ಸುದ್ದೀನ್ ವೃತ್ತದಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಸುಲ್ತಾನ್ ಸ್ಟ್ರೀಟ್ ಚೌಕ್ ಬಝಾರ್ ಮೂಲಕ ಸಾರ್ವಜನಿಕ ಮೈದಾನದಲ್ಲಿ ಸಮಾಪ್ತಿಗೊಂಡಿತು. ಬಝ್ಮೆ ಫೈಝೆ ರಸೂಲ್ ಸಂಘಟನೆಯ ಅಧ್ಯಕ್ಷ ಕ್ವಾಜಾ ಮಕಾನ್ದಾರ್ ಮೆರವಣೆಗೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಫಾರೂಖೀ ಸಾಹೇಬ್, ಎಸ್.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ಕೆ.ಎಂ.ಶರೀಫ್, ಸಯೀದ್ ಅಲ್ವಿ ಕರ್ಕಿ, ಜಿಫ್ರಿ ಅಕ್ರಮಿ, ಅಬ್ದುಲ್ ಸತ್ತಾರ್, ಮೌಲಾನ ಮೆ‌ಅರಾಜ್, ಮುಹಮ್ಮದ್ ಯಾಸೀನ್ ಮತ್ತು ಸಂಘದ ಸದಸ್ಯರು ಹಾಜರಿದ್ದರು. – Sahil Online Click here for more

Comments

Leave a Reply

Your email address will not be published. Required fields are marked *