ಇಂದು ಡಿಸೆಂಬರ್ 14. ನಾಳೆ ಅಂದ್ರೆ ಡಿಸೆಂಬರ್ 15 ರಂದು ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಹಳೆ 500 ನೋಟು ಚಲಾವಣೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಮುಗಿಯಲಿದೆ. ನಾಳೆ ನಂತ್ರ ಟೋಲ್, ವಿದ್ಯುತ್ ಕಂಪನಿ, ಎಲ್ಪಿಜಿ ಏಜೆನ್ಸಿ, ಸರ್ಕಾರಿ ತೆರಿಗೆ ಇಲಾಖೆಗಳಲ್ಲಿ ಹಳೆ ನೋಟು ಚಲಾವಣೆಯಾಗುವುದಿಲ್ಲ.
ನವೆಂಬರ್ 8 ರ ಮಧ್ಯರಾತ್ರಿಯಿಂದ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆ ಬಂದ್ ಆಗಿದೆ. ಆದ್ರೆ ಸರ್ಕಾರ ಕೆಲವು ಕಡೆ ವಿನಾಯಿತಿ ನೀಡಿತ್ತು. 21 ಸ್ಥಳಗಳಲ್ಲಿ ಡಿಸೆಂಬರ್ 15 ರವರೆಗೆ ಹಳೆ ನೋಟುಗಳನ್ನು ಚಲಾವಣೆ ಮಾಡಬಹುದೆಂದು ಆದೇಶ ನೀಡಿತ್ತು.
ನಂತ್ರ ಕೇಂದ್ರ ಸರ್ಕಾರ ತನ್ನ ನಿಯಮದಲ್ಲಿ ಸಾಕಷ್ಟು ಬದಲಾವಣೆ ಮಾಡ್ತಾ ಬಂತು. ಪೆಟ್ರೋಲ್ ಬಂಕ್, ವಿಮಾನ ನಿಲ್ದಾಣದಲ್ಲಿ ಟಿಕೆಟ್ ಬುಕ್ಕಿಂಗ್, ರೈಲ್ವೆ ಟಿಕೆಟ್ ಬುಕ್ಕಿಂಗ್ ಸೇರಿದಂತೆ ಅನೇಕ ಕಡೆ ಹಳೆ ನೋಟುಗಳ ಚಲಾವಣೆಯನ್ನು ಈಗಾಗಲೇ ರದ್ದು ಮಾಡಿದೆ.
ಜೊತೆಗೆ ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ಈಗಾಗಲೇ ಸಂಪೂರ್ಣವಾಗಿ ನಿಷೇಧಿಸಿದೆ. ನಾಳೆ ನಂತ್ರ ಹಳೆ ನೋಟು ಸ್ವೀಕಾರವಾಗುವುದಿಲ್ಲ. ಡಿಸೆಂಬರ್ 31 ರ ನಂತ್ರ ಬ್ಯಾಂಕ್ ಕೂಡ ಹಳೆ ನೋಟುಗಳನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ನಿಧಾನ ಮಾಡದೆ ಆದಷ್ಟು ಬೇಗ ನಿಮ್ಮ ಬಳಿ ಇರುವ ಹಣವನ್ನು ಖಾತೆಗೆ ಜಮಾ ಮಾಡಿ ಬನ್ನಿ.
Leave a Reply