ಹೂಡೆ: ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಶಾಲಾ ವಾರ್ಷಿಕ ಕ್ರೀಡಾ ಕೂಟವನ್ನು ಆಯೋಜಿಸಲಾಯಿತು. ಕ್ರೀಡಾ ಕೂಟದ ಉದ್ಘಾಟನೆಯನ್ನು ತ್ರಿವರ್ಣ ಬಣ್ಣದ ಬಲೂನುಗಳನ್ನು ಹಾರಿಸುದರ ಮುಖಾಂತರ ಖ್ಯಾತ ಉದ್ಯಮಿ ಜನಾಬ್ ಇರ್ಷಾದ್ ನೇಜಾರ್ ನೇರವೇರಿಸಿದರು.
ಸೈಮ್ ಗ್ರೂಪ್ ನ ಮಾಲಿಕರಾದ ಜನಾಬ್ ಸಾದೀಕ್ ಕ್ರೀಡಾ ಕೂಟದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಯು ಪೂರಕವಾಗಿದೆ. ಪೋಷಕರು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹವನ್ನು ಕಲ್ಪಿಸಬೇಕೆಂದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಜನಾಬ್ ಅಕ್ಬರ್ ಅಲಿ ಕಾರ್ಯಕ್ರಮದ ಅಧ್ಯಕ್ಷೀಯತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಅಬ್ದುಲ್ ಕಾದೀರ್ ಮೊಯ್ದೀನ್, ಇಮ್ತಿಯಾಝ್ ಜಿ, ಹುಸೇನ್ ಮಾಸ್ಟರ್, ಪ್ರೊ.ಅಬ್ದುಲ್ ಅಝೀಜ್ ಉಪಸ್ಥಿತರಿದ್ದರು. ಅಸ್ಲಾಮ್ ಹೈಕಾಡಿ, ಆಡಾಳಿತಧಿಕಾರಿ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಸ್ವಾಗತಿಸಿದರು. ಶಾಬಾನಾ ಮಾಮ್ತಾಜ್ ಧನ್ಯವಾದವಿತ್ತರು. ಆಶಾಲತಾ ಹಾಗೂ ಸಬೀಹಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಣೀಯ ಪಿರಮಿಡ್ ಮತ್ತು ದೈಹಿಕ ಕಸರತ್ತುಗಳನ್ನು ಪ್ರದರ್ಶಿಸಲಾಯಿತು.
Share via Whatsapp
Source – Kemmannu.com
Leave a Reply