ಗಂಗೊಳ್ಳಿ: ತೌಹೀದ್ ಬಾಲಕಿಯರ ಪಿಯು ಮತ್ತು ಮಹಿಳಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ

ಗಂಗೊಳ್ಳಿ, ಡಿ ೨೧: ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ತೌಹೀದ್ ಬಾಲಕಿಯರ ಪಿಯು ಕಾಲೇಜು ಮತ್ತು ತೌಹೀದ್ ಮಹಿಳೆಯರ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟವನ್ನು ಎರಡು ಹಂತಗಳಲ್ಲಿ 20 ಡಿಸೆಂಬರ್ ರ ಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು.

ಎರಡೂ ಕಾರ್ಯಕ್ರಮಗಳನ್ನು ಸರಳ ಸಮಾರಂಭವೊಂದರಲ್ಲಿ ತೌಹೀದ್ ಸಂಸ್ಥೆಯ ಖಜಾಂಜಿ ಶ್ರೀ ಅಬ್ದುಲ್ ಹಮೀದ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ ಕಾಶಿನಾಥ್ ಪಿ ಪೈ ಗಂಗೂಲಿಯವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.

ಪ್ರೊ ನಾರಾಯಣ ರಾವ್, (ಪ್ರಿನ್ಸಿಪಾಲ್ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು, ನಾವುಂದ), ಶ್ರೀ ರಘುರಾಮ್ (ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್, ಗಂಗೊಳ್ಳಿ), ಶ್ರೀ ಮಹಾದೇವ ಜಿ ಬಣವಾಲಿಕರ್ (ನಾವುಂದ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಪಕರು) ಮತ್ತು ಜನಾಬ್ ಮುಹಮ್ಮದ್ ಅಲಿ (ನಿರ್ದೇಶಕರು, ಸಂಜೀವಿನಿ ಪೈಪ್ಸ್, ಹೆಮ್ಮಾಡಿ) ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಹಲವು ಅನಿವಾಸಿ ಭಾರತೀಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಲ್ಲಾ ಆಹ್ವಾನಿತ ಅತಿಥಿಗಳನ್ನು ಶಾಲಾ ವಿದ್ಯಾರ್ಥಿಗಳು ‘ಗಾರ್ಡ್ ಆಫ್ ಆನರ್’ ಅಥವಾ ಗೌರವ ಕವಾಯತು ಮೂಲಕ ಆಹ್ವಾನಿಸಲಾಯಿತು. ಬಳಿಕ ಹೊಳೆಯುವ ಬಟ್ಟೆ ತೊಟ್ಟ ಬಾಲಕಿಯರಿಂದ ಕವಾಯತು ಬಳಿಕ ‘ಸೀರೆ ಡ್ರಿಲ್’ ಹಾಗೂ ದೇಶಭಕ್ತಿಯ ಗೀತೆಗೆ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯದ ಕುರುಹಾಗಿ ಬೆಲೂನುಗಳನ್ನು ಆಕಾಶಕ್ಕೆ ಬಿಡಲಾಯಿತು.

ಕ್ರೀಡಾಂಗಣದಲ್ಲಿ ಮೂರೂ ಶಾಲೆಗಳ ಧ್ವಜಗಳನ್ನು ಹಾರಿಸಲಾಗಿತ್ತು. ಆಯಾ ಶಾಲಾ ತಂಡಗಳನ್ನು ಹೌಸ್ ಅಥವಾ ಪಂಗಡದಲ್ಲಿ ಪ್ರಸ್ತುತಪಡಿಸಲಾಗಿದ್ದು ಪ್ರತಿ ಹೌಸ್ ನ ವಿದ್ಯಾರ್ಥಿಗಳು ಹೌಸ್ ಕಮಾಂಡೆಂಟ್ ಅಬ್ದುಲ್ಲಾ ಎಮ್ಎಚ್ ರವರ ನೇತೃತ್ವದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಬಾಲಕಿಯರಿಂದ “ತೌಹೀದ್ ಕಾ ತರಾನಾ” ಹಾಗೂ ಬಾಲಕರಿಂದ ಆಕರ್ಷಕ ಮಾನವ ಪಿರಮಿಡ್ ರಚನೆಗಳು ಮೂಡಿಬಂದವು. ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು.

ಅಲ್ಪ ವಿರಾಮದ ನಂತರ, ಪ್ರತಿಷ್ಠಿತ ಎರಡನೇ ಹಂತದ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀ ಮೊಹಮ್ಮದ್ ಅಲಿ ಯವರು ಹಿಂದಿನ ದಿನಗಳಲ್ಲಿ ತೌಹೀದ್ ಸಂಸ್ಥೆ ಸಾಧಿಸಿದ ಸಾಧನೆಗಳನ್ನು ಮೆರೆಯುವ ಸ್ತಬ್ದಚಿತ್ರಾವಳಿಯನ್ನು ಪ್ರಸ್ತುತಪಡಿಸಿದರು. ಬಳಿಕ ಎಲ್ಲಾ ಆಹ್ವಾನಿತ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮ ಆಯೆಷಾ ಜುಮೇರಾರವರು ಕಿರಾತ್ ಪಠಿಸುವ ಮೂಲಕ ಪ್ರಾರಂಭವಾಯಿತು. ಫಾತಿಮಾ ಮರ್ಹಾ ಮತ್ತು ಸಫ ಸಯೀದ್ ಈ ಕಿರಾತ್ ನ ಅನುವಾದವನ್ನು ಮಂಡಿಸಿದರು. ಬಳಿಕ ತಂಜೀಲಾ ಬೇಗಂ ಖಾಲಾ ಕಾಜಿ ಯವರಿಮ್ದ ನಾತ್ ಹಾಡಿದರು. ಅದೀಬಾ ಖಾನ್ ಸ್ವಾಗತಿಸಿದರು. ಶಮಾಮಾ, ಯಶ್ರಾ ಅಸ್ಸಾದಿ, ಆಯೆಷಾ ತೂಬಾ, ಬಿಬಿ ಕುಲ್ಸುಂ, ಶ್ವೇತಾ ಪೂಜಾರಿ ಮತ್ತು ಸ್ವಾತಿ ಗಣ್ಯರನ್ನು ಸಭೆಗೆ ಪರಿಚಯಿಸಿತು. ಮಿಸ್ಬಾ ವಂದಿಸಿದರು. ಆಯೆಷಾ ಸಹ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲ ಸಂಯೋಜಕಿಯರಾದ ರೇಶ್ಮಾ ತಾಜ್ ಮತ್ತು ಸಹಾಯಕ ಶಿಕ್ಷಕಿ ರೇಶ್ಮಾ ಶೆರಿಷ್ ಆಟೋಟಗಳ ನಿರೂಪಣೆ ನೀಡಿದರು.ಎಸ್ಪಿಎಲ್ ಅಬ್ದುಲ್ಲಾ ಎಮ್ಎಚ್, ಸಹಾ ಕಾರ್ಯಕ್ರಮದ ವೀಕ್ಷಕ ವಿವರಕರಾಗಿ ಕಾರ್ಯನಿರ್ವಹಿಸಿದರು.


Share on WhatsApp

 Source- SahilOnline

Comments

Leave a Reply

Your email address will not be published. Required fields are marked *