ಬೆಂಗಳೂರು, ಡಿಸೆಂಬರ್ 27: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು 2017ರ ಮಾರ್ಚ್ 9 ರಿಂದ 27ರ ವರೆಗೆ ನಡೆಸಲು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ತಾತ್ಕಾಲಿಕ ವೇಳಾಪಟ್ಟಿಯನ್ನು ನವೆಂಬರ್ 3 ರಂದು ಕರ್ನಾಟಕ ಪದವಿಪೂರ್ವ ಇಲಾಖೆ ಪ್ರಕಟಿಸಿತ್ತು ಇದನ್ನು ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟಿಸಲಾಗಿತ್ತು. ಈಗ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮಾ.11 ರಂದು ಇದ್ದ ಹಿಂದೂಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಯನ್ನು ಮಾರ್ಚ್ 15ಕ್ಕೆ ಮುಂದೂಡಲಾಗಿದೆ. ಮಾರ್ಚ್ 15ರಂದು ಇದ್ದ ಶಿಕ್ಷಣ ತರ್ಕಶಾಸ್ತ್ರವನ್ನು ಮಾ.11 ರಂದು ಮುಂಗಡವಾಗಿ ಪರೀಕ್ಷೆಯನ್ನು ನೀಡಲಾಗಿದೆ. ಜೊತೆಗೆ ಬೇಸಿಕ್ ಮ್ಯಾಥ್ಸ್ ಅಂದೇ ನಡೆಯಲಿದೆ.
2017ರ ಮಾರ್ಚ್ 9ರಿಂದ 27ರವರೆಗೆ ಪರೀಕ್ಷೆ. ಬೆಳಿಗ್ಗೆ 9:30ರಿಂದ 12:45ರವರೆಗೆ. ವೇಳಾಪಟ್ಟಿ ಇಂತಿದೆ:
- 9.3.17- ಜೀವಶಾಸ್ತ್ರ/ ಇತಿಹಾಸ
- 10.3.17- ಗಣಕ ವಿಜ್ಞಾನ/ಎಲೆಕ್ಟ್ರಾನಿಕ್ಸ್
- 11.3.17- ತರ್ಕ ಶಾಸ್ತ್ರ/ ಶಿಕ್ಷಣ/ ಬೇಸಿಕ್ ಮ್ಯಾಥ್ಸ್
- 13.3.17- ಸಮಾಜಶಾಸ್ತ್ರ/ ಲೆಕ್ಕಶಾಸ್ತ್ರ
- 14.3.17- ಗಣಿತ
- 15.3.17- ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ
- 16.3.17- ಅರ್ಥಶಾಸ್ತ್ರ/ ಭೂಗರ್ಭಶಾಸ್ತ್ರ
- 7.3.17- ಭೌತಶಾಸ್ತ್ರ
- 18.3.17- ಮನಃಶಾಸ್ತ್ರ
- 20.3.17- ರಸಾಯನಶಾಸ್ತ್ರ/ ವಾಣಿಜ್ಯ ಅಧ್ಯಯನ/ ಐಚ್ಛಿಕ ಕನಡ
- 21.3.17- ರಾಜ್ಯಶಾಸ್ತ್ರ
- 22.3.17- ಹಿಂದಿ/ ತೆಲುಗು
- 23.3.17- ಕನ್ನಡ/ ತಮಿಳು/ ಮಲಯಾಳಂ/ ಅರೇಬಿಕ್
- 24.3.17- ಸಂಸ್ಕೃತ/ ಮರಾಠಿ/ ಉರ್ದು/ ಫ್ರೆಂಚ್
- 25.3.17- ಭೂಗೋಳಶಾಸ್ತ್ರ/ ಸಂಖ್ಯಾಶಾಸ್ತ್ರ/ ಗೃಹವಿಜ್ಞಾನ
- 27.3.17- ಇಂಗ್ಲಿಷ್
ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ವಿಜ್ಞಾನ ವಿಭಾಗದ ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗಿ, ಮರುಪರೀಕ್ಷೆಯಾಗಿತ್ತು. ಈ ಬಗ್ಗೆ ಆ ನಂತರ ತನಿಖೆಯಾಗಿ ತಪ್ಪಿತಸ್ಥರನ್ನು ಬಂಧಿಸಲಾಗಿತ್ತು. ಪರೀಕ್ಷಾ ಮಂಡಳಿ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
Share Via WhatsApp
Leave a Reply