ಕುಂದಾಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರು ಹಾಗೂ ಅಧ್ಯಕ್ಷರನ್ನಾಗಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವಧಿರನ್ನು ನೇಮಕ ಮಾಡಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಅವರಿಗೆ ಸಂಪುಟ ದರ್ಜೆ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ.
ಗೋಪಾಲ ಪೂಜಾರಿ ಅವರು 1998ರಿಂದ 2008ರ ತನಕ ಸತತ ಮೂರು ಬಾರಿ ಹಾಗೂ 2013ರ ಚುನಾವಣೆಯಲ್ಲಿ ಪುನಃ ಗೆಲ್ಲುವ ಮೂಲಕ ನಾಲ್ಕು ಬಾರಿ ಬೈಂದೂರು ಕ್ಷೇತ್ರವನ್ನು ಪ್ರತಿನಿಧಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪದವಿ ವಿದ್ಯಾಭ್ಯಾಸ ಮುಗಿಸಿ ಹೊಟೇಲ್ ಉದ್ಯಮವನ್ನು ಆರಂಭಿಸಿದ ಗೋಪಾಲ ಪೂಜಾರಿ ಅವರು 1997ರಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷವನ್ನು ಸೇರಿ ರಾಜಕೀಯಕ್ಕೆ ಧುಮಿಕಿದ್ದರು. 1998 ರಿಂದ 2010ರ ತನಕ ಕೆಪಿಸಿಸಿ ಸದಸ್ಯರಾಗಿ, 2010ರಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.
ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಅವರು ಹೆಮ್ಮಾಡಿಯ ವಿ.ವಿ.ವಿ. ಮಂಡಳಿಯ ಅಧ್ಯಕ್ಷರಾಗಿ ಜನತಾ ಪ್ರೌಢಶಾಲೆ, ಸ್ವತಂತ್ರ ಪ.ಪೂ. ಕಾಲೇಜು, ಬೈಂದೂರು ರತ್ತೂಬಾಯಿ ಜನತಾ ಹೈಸ್ಕೂಲ್ ಮುನ್ನಡೆಸುವಲ್ಲಿ ಕಾರಣಕರ್ತರಾಗಿದ್ದರು. ಕಟ್‌ಬೆಲೂ¤ರು ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಶ್ರೀ ಸಾಗರ್ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಅನೇಕ ಶಾಖೆಯನ್ನು ತೆರೆಯುವುದರಲ್ಲಿ ಯಶಸ್ವಿಯಾಗಿದ್ದರು.
ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಆಸಕ್ತಿ ವಹಿಸಿದ್ದ ಅವರು ಅತಿ ಹೆಚ್ಚು ಅನುದಾನವನ್ನು ಪಡೆದ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಸಂತಸ ತಂದಿದೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆಯ ಮಂಡಳಿ ಅಧ್ಯಕ್ಷತೆ ನೀಡಿರುವುದು ಸಂತಸ ತಂದಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಆಸ್ಕರ್, ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗೇ ಗೌಡ ಹಾಗೂ ಪಕ್ಷದ ಹಿರಿಯರು ಅವರು ಈ ಅವಕಾಶವನ್ನು ಕಲ್ಪಿಸಿದ್ದು, ಸಂಸ್ಥೆಯನ್ನು ಲಾಭದಾಯಕವಾಗಿ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುವುದೊಂದಿಗೆ ಜನರಿಗೆ ಸಂಸ್ಥೆ ಉತ್ತಮ ಸೇವೆಯನ್ನು ನೀಡಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ
– ಗೋಪಾಲ ಪೂಜಾರಿ

Leave a Reply