ಉಡುಪಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ನಾಯಕರ ಅಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಬೆಳಪುವಿನ ಮಿನರ ಮಸೀದಿಯ ಸಭಾಂಗಣದಲ್ಲಿ ದಿನಾಂಕ 26-01-2017 ರಂದು ನಡೆಯಿತು.
ಈ ಸಭೆಯಲ್ಲಿ ನೂತನ ಅವಧಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷರಾಗಿ ಆಗಿ ನಿಸಾರ್ ಬ್ರಮ್ಮವರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಫಯಾಝ್ ಮಲ್ಪೆ ಆಯ್ಕೆಯಾದರು.
ಜಿಲ್ಲೆಯ 2016ನೇ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಲಾಯಿತು.
ಸಭೆಯಲ್ಲಿ ರಾಜ್ಯ ಸಮೀತಿ ಸದಸ್ಯರಾದ ಶಾಫಿ ಬೆಳ್ಳಾರೆ, ಇಳಿಯಾಸ್ ತುಂಬೆ ನಿರ್ಗಮನ ಅದ್ಯಕ್ಷರಾದ ಫಝಿಲ್ ಅದೀ ಉಡುಪಿ , ಹಾಗೂ ಕಾರ್ಯದರ್ಶಿ ಅಲಮ್ ಬ್ರಮ್ಮವರ ಉಪಸ್ಥಿತಿಯಿದ್ದರು, ರಾಜ್ಯ ಸಮೀತಿ ಸದಸ್ಯರಾದ ಶಾಫಿ ಬೆಳ್ಳಾರೆ ಸಮಾರೋಪ ಭಾಷಣದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
Leave a Reply