ಒಮ್ಮೆ ವಾಟ್ಸಾಪ್ ಸಂದೇಶ ಕಳುಹಿಸಿಬಿಟ್ಟರೆ, ವಾಪಸು ತೆಗೆದುಕೊಳ್ಳುವ ಅಥವಾ ಅದನ್ನು ಎಡಿಟ್ ಮಾಡುವ ಅವಕಾಶ ಇಲ್ಲಿ ಯತನಕ ಇರಲಿಲ್ಲ. ಆದರೆ, ಇನ್ನು ಮುಂದೆ ಕಳುಹಿ ಸಿದ ಸಂದೇಶವನ್ನು ನಿಮಗೆ ಇಷ್ಟವಿಲ್ಲದಿದ್ದರೆ ಧಾರಾಳ ವಾಗಿ ಅದನ್ನು ವಾಪಸ್ ತೆಗೆದುಕೊಳ್ಳಬಹುದು.ಬೇಡದಸಾಲುಗಳನ್ನು ಅಳಿಸಿ, ಹೊಸತಾಗಿ ಸಂದೇಶಗಳನ್ನು ತಿದ್ದುಪಡಿ ಮಾಡಿ ಕಳುಹಿಸಬಹುದು.
2017ರ ಆರಂಭದಲ್ಲಿಯೇ ಈ ಕೊಡುಗೆ ನೀಡಲು ಬಯಸಿದ್ದ ವಾಟ್ಸಾéಪ್, ತಿಂಗಳು ತಡವಾಗಿ ಗ್ರಾಹಕರಿಗೆ ಈ ಗಿಫ್ಟ್ ನೀಡಿದೆ. ಅಳಿಸುವ, ವಾಪಸು ತೆಗೆದುಕೊಳ್ಳುವ ಎರಡು ಅಂಶಗಳನ್ನು ಸುಧಾರಿಸಿರುವ ವಾಟ್ಸಾéಪ್ ಕುರಿತು ಡಬ್ಲ್ಯುಎಬೆಟಾಇನ್ಫೋ ಟ್ವಿಟ್ಟರಿನಲ್ಲಿ ಮಾಹಿತಿ ಹಂಚಿಕೊಂಡಿದೆ. ಆ್ಯಂಡ್ರಾಯ್ಡ 2.17.25ನಲ್ಲಿ ಈ ಸುಧಾರಿತ ವಾಟ್ಸಾಪ್ ಅನ್ನು ಅಳವಡಿಸಲಾಗಿದೆ.
ಎಡಿಟ್ ಫೀಚರ್‌ನಲ್ಲೇನಿದೆ?
ಸಂದೇಶವನ್ನು ಯಾರು ಕಳುಹಿಸುತ್ತಾರೋ ಅವರಿಗಷ್ಟೇ ಇದು ಅನ್ವಯ. ಸಂದೇಶ ಸ್ವೀಕರಿಸಿದ ವ್ಯಕ್ತಿ ಅದನ್ನು ಓದುವುದಕ್ಕಿಂತ ಮುಂಚೆಯೇ ಆ ಸಂದೇಶವನ್ನು ತಿದ್ದುವ ಅವಕಾಶವನ್ನು ಸುಧಾರಿತ ವಾಟ್ಸಾéಪ್‌ನಲ್ಲಿ ಸೇರಿಸಲಾಗಿದೆ. ಸಂದೇಶವನ್ನು ಎಡಿಟ್ ಮಾಡಿರುವ ಸಂಗತಿ ಓದುಗನ ವಾಟ್ಸಾéಪ್ ಪರದೆ ಮೇಲೆ ಮೂಡುತ್ತದೆ. ಆದರೆ, ಈ ಅಂಶವನ್ನು ಮೊದಲು ಆವಿಷ್ಕರಿಸಿದ್ದು ವಾಟ್ಸಾéಪ್ ಅಲ್ಲ. ಈಗಾಗಲೇ ಇದು ಟೆಲಿಗ್ರಾಫ್ ಮತ್ತು ಬಿಬಿಎಂಗಳಲ್ಲಿ ಅಳವಡಿಕೆಯಾಗಿದೆ.

ರೀಕಾಲ್ ಫೀಚರ್‌ನಲ್ಲೇನಿದೆ?
ಸಂದೇಶವನ್ನು ಒಮ್ಮೆ ಕಳುಹಿಸಿದಾಗ, ಅದನ್ನು ವಾಪಸು ತೆಗೆದುಕೊಳ್ಳುವ ಅವಕಾಶವನ್ನೂ ಸುಧಾರಿತ ವಾಟ್ಸಾéಪ್‌ನಲ್ಲಿ ಅಳವಡಿಸಲಾಗಿದೆ. ಆದರೆ, ಸಂದೇಶ ಸ್ವೀಕರಿಸಿದ ವ್ಯಕ್ತಿ ಅದನ್ನು ಓದದೇ ಇದ್ದಾಗಲಷ್ಟೇ ಈ ಅವಕಾಶ ಲಭ್ಯ. ಸಂದೇಶ ರೀಕಾಲ್ ಮಾಡಿರುವ ಸಂಗತಿಯೂ ಸ್ವೀಕೃತ ವ್ಯಕ್ತಿಯವಾಟ್ಸಾಪ್ ಪರದೆ ಮೇಲೆ ಮೂಡುತ್ತದೆ. “ಅದು ಯಾವ ಸಂದೇಶ?’ ಎನ್ನುವುದು ಮಾತ್ರ ಆ ವ್ಯಕ್ತಿಗೆ ಗೊತ್ತಾಗುವುದಿಲ್ಲ.

Leave a Reply