ರಾತ್ರಿ ಸರಿಸುಮಾರು 10 ಗಂಟೆಗೆ ಅಂಗಡಿಯ ಹೊರಗೆ ಲಘು ಹೊಗೆ ಕಾಣಿಸಿಕೊಂಡಿತ್ತು. ಅರ್ಧ ಗಂಟೆಯ ಬಳಿಕ ಅಂಗಡಿಯ ಶಟರ್ ಭಾಗದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದ್ದರಿಂದ ಸ್ಥಳೀಯರು ಬೆಂಕಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು.
ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಗೆ ಇಡೀ ಅಂಗಡಿ ವ್ಯಾಪಿಸಿದ ಪರಿಣಾಮ ಅಂಗಡಿಯೊಳಗಿದ್ದ ವಸ್ತಗಳೆಲ್ಲ ಸ್ಪೋಟಗೊಂಡಿತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಂಗಡಿ ಮಾಲೀಕರು ತಮ್ಮ ಜೀವವನ್ನು ಲೆಕ್ಕಿಸದೆ ಅಂಗಡಿಯ ಶಟರ್ ಬಾಗಿಲನ್ನು ಮೇಲೆತ್ತಿದ ಕ್ಷಣಾರ್ಧದಲ್ಲೇ ಬೆಂಕಿ ಅಂಗಡಿಯ ಹೊರಗೂ ವ್ಯಾಪಿಸಿತು. ಅಂಗಡಿಯ ಮಾಲೀಕ ಅದೃಷ್ಟವಶಾತ್ ಪಾರಾಗಿದ್ದಾರೆ.
ಗಂಟೆಗಳ ಬಳಿಕ ಬಂದ ಅಗ್ನಿಶಾಮಕ ದಳ ಅಂಗಡಿಯೊಳಗೆ ದಟ್ಟ ಹೊಗೆ ಆವರಿಸಿದ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಆದರೆ ಬೆಂಕಿ ಅವಘಡ ಸಂಭವಿಸಿ ಒಂದು ಗಂಟೆಯ ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸಿದ್ದಾರೆ.


Leave a Reply