ಮುಳ್ಳಿಕಟ್ಟೆ ಗೇರು ಪ್ಲಾಂಟೇಶನ್‌ನಲ್ಲಿ ಬೆಂಕಿ ಆಕಸ್ಮಿಕ: ಅಪಾರ ಹಾನಿ

ಕುಂದಾಪುರ, 29th Jan: ಗಂಗೊಳ್ಳಿ -ಮುಳ್ಳಿಕಟ್ಟೆ ರಸ್ತೆಯಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಗೇರು ಪ್ಲಾಂಟೇಶನ್‌ನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅಕಸ್ಮಿಕದಿಂದಾಗಿ ಗೇರು ಪ್ಲಾಂಟೇಶನ್‌ ಸುಟ್ಟು ಹೋಗಿದ್ದು, ನೂರಾರು ಗೇರು ಮರಗಳು ಹಾನಿಗೊಳಗಾಗಿವೆ. 

ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ ಮುಳ್ಳಿಕಟ್ಟೆ ಸಮೀಪದಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಗೇರು ಪ್ಲಾಂಟೇಶನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಂಕಿ ಶೀಘ್ರವಾಗಿ ಇಡೀ ತೋಟವನ್ನು ಆವರಿಸಿಕೊಂಡಿತು. ಬೆಂಕಿ ಸುತ್ತಮುತ್ತಲ ಪ್ರದೇಶಕ್ಕೆ ವ್ಯಾಪಿಸತೊಡಗಿದ್ದು, ಮುಳ್ಳಿಕಟ್ಟೆ ಗೇರು ಪ್ಲಾಂಟೇಶನ್‌ ಸಂಪೂರ್ಣವಾಗಿ ಬೆಂಕಿಯಿಂದ ಹಾನಿಗೊಳಗಾಗಿದೆ. 
ಸ್ಥಳಕ್ಕೆ ಧಾವಿಸಿದ ಕುಂದಾಪುರದ ಅಗ್ನಿಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿದಧಿರು. ಒಂದು ತಿಂಗಳ ಹಿಂದಷ್ಟೇ ಮುಳ್ಳಿಕಟ್ಟೆ ಗೇರು ಪ್ಲಾಂಟೇಶನ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಗೇರು ಮರಗಳಿಗೆ ಹಾನಿಯಾಗಿತ್ತು.

Udayavani

Comments

Leave a Reply

Your email address will not be published. Required fields are marked *