ಮರವಂತೆ, ಅಕ್ಟೋಬರ್ 17, 2024: ಮರವಂತೆ ಬೀಚ್ ವರಾಹ ಸ್ವಾಮಿ ದೇವಸ್ಥಾನದ ಎದುರಿನ ಹೆದ್ದಾರಿಯಲ್ಲಿ ಆಂಧ್ರ ಪ್ರದೇಶ ನೋಂದಣಿಯ ಲಾರಿಯೊಂದರ ಒಳಗೆ ಚಾಲಕನ ಶವ ಪತ್ತೆಯಾಗಿದೆ. ತಾಂತ್ರಿಕ ಧೋಷದ ಕಾರಣದಿಂದ ಲಾರಿ ಕಳೆದ 6 ದಿನಗಳಿಂದ ನಿಂತಿರುವುದಾಗಿ ತಿಳಿದುಬಂದಿದೆ. ಚಾಲಕ ಬಾಬು ರಾಯ್ (ಆಂಧ್ರ ಪ್ರದೇಶ ಮೂಲ) ಅನಾರೋಗ್ಯದಿಂದ ಬಳಲುತ್ತಿದ್ದು, ನಾಲ್ಕು ದಿನಗಳ ಹಿಂದೆ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಿಗ್ಗೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ಬಸವ ಕನಶೆಟ್ಟಿ, ಸಹಾಯಕ ಠಾಣಾಧಿಕಾರಿ ಅಮೃತೇಶ್ ಮತ್ತು ಸಿಬ್ಬಂದಿಗಳಾದ ನಾಗರಾಜ್ ಶೇರಿಗಾರ್, ರಿತೇಶ್ ಮುನಿಯಾಲ್, ರಾಘವೇಂದ್ರ ಪೂಜಾರಿ, ಮುಖ್ಯ ಪೇದೆ ನಾಗರಾಜ್ ನಾಯಕವಾಡಿ ಭಾಗವಹಿಸಿದರು. 24×7 ಆಂಬ್ಯುಲೆನ್ಸ್ ತಂಡದ ಇಬ್ರಾಹಿಂ ಗಂಗೊಳ್ಳಿ, ಪ್ರಮೋದ್ ಪಮ್ಮಿ ತ್ರಾಸಿ, ಮಾಗ್ದುಮ್ ಕೈಫ್ ಕಿರಿಮಂಜೇಶ್ವರ, ಖಾಲಿದ್ ಗಂಗೊಳ್ಳಿ ಸಹಿತ ಸ್ಥಳೀಯರು ಶವ ಸಾಗಾಟದಲ್ಲಿ ಸಹಕರಿಸಿದರು. ಶವವನ್ನು ಮಣಿಪಾಲ ಆಸ್ಪತ್ರೆಯ ಶವ ಶೀತಲೀಕರಣ ಘಟಕಕ್ಕೆ ಕೊಂಡೊಯ್ಯಲಾಗುತ್ತಿದ್ದು, ಮೃತರ ಜೊತೆಯಲ್ಲಿದ್ದ ಕ್ಲೀನರ್ ಶ್ರೀವಾಸ್ ಈ ಮಾಹಿತಿ ನೀಡಿದ್ದಾರೆ. ಮೃತರ ವಾರಸುದಾರರು ಇಂದು ಸಂಜೆ ವೇಳೆಗೆ ಮಣಿಪಾಲ ತಲುಪಲಿದ್ದಾರೆ.
Leave a Reply