ಗಂಗೊಳ್ಳಿ, ಅಕ್ಟೋಬರ್ 17, 2024: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆನಾಪುರ ರೈಲ್ವೆ ನಿಲ್ದಾಣದಲ್ಲಿ ತಡರಾತ್ರಿ 2:45ರ ಸಮಯದಲ್ಲಿ ಭೋಪಾಲ್, ರಾಜ್ಯದ ಯುವಕನೊಬ್ಬ ರೈಲಿನಿಂದ ಬಿದ್ದು ಗಾಯಗೊಂಡ ಘಟನೆ ಸಂಭವಿಸಿದೆ. ರಕ್ತಸಿಕ್ತ ಬಟ್ಟೆಯೊಂದಿಗೆ ಯುವಕನು ಹೆದರಿಕೆಯಿಂದ ಹತ್ತಿರದ ಮನೆಗಳ ಸಮೀಪ ತೆರಳಿ ಭಯದ ವಾತಾವರಣ ಸೃಷ್ಟಿಸಿದ್ದ. ತಕ್ಷಣ ಸ್ಥಳೀಯ ಅಂಬೇಡ್ಕರ್ ನಗರದ ನಿವಾಸಿಗಳು 112 ಪೊಲೀಸ್ ಹಾಗೂ ನಮ್ಮ 24×7 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದರು.
ತುರ್ತು ಸ್ಪಂದನೆಯೊಂದಿಗೆ ಯುವಕನನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಡಾಕ್ಟರ್ ಆದರ್ಶ ಹೆಬ್ಬಾರ್ ಮಾನವೀಯ ನೆಲೆಯಲ್ಲಿ ಚಿಕಿತ್ಸೆಗೆ ಮುಂದೆ ಬಂದಿದ್ದು, ಯುವಕನ ತಲೆಗಾಯಕ್ಕೆ ಹೊಲಿಗೆ ಹಾಕಿ ಉಪಚಾರ ನೀಡಲಾಗಿದೆ. ಈಗ ಆತನನ್ನು ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಚಾಲಕ ದಿನೇಶ್ ಬೈಂದೂರು, ಮುಖ್ಯ ಪೇದೆ ಶಾಂತಾರಾಮ್ ಶೆಟ್ಟಿ, ಅಬ್ರರ್ ಗಂಗೊಳ್ಳಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಮತ್ತು ಸಹಕರಿಸಿದ ಎಲ್ಲರಿಗೂ ಶ್ಲಾಘಿಸಿದ್ದಾರೆ.
Leave a Reply