ಕುವೈತ್‌ ಅಗ್ನಿ ಅವಘಡ | 49ಕ್ಕೆ ತಲುಪಿದ ಸಾವಿನ ಸಂಖ್ಯೆ, 24 ಮಂದಿ ಮಲಯಾಳಿಗಳು

ಕುವೈತ್‌ನ ಆರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಮಂಗಾಫ್ ಬ್ಲಾಕ್‌ನಲ್ಲಿರುವ ಕಟ್ಟಡವೊಂದರಲ್ಲಿ ಈ ದುರ್ಘಟನೆ ನಡೆದಿದೆ.

ಆದರೆ, ಅಪಘಾತದಲ್ಲಿ ಮೃತಪಟ್ಟವರಲ್ಲಿ 24 ಮಂದಿ ಕೇರಳ ನಿವಾಸಿಗಳು ಎಂದು ಅನಿವಾಸಿ ಕೇರಳೀಯರ ವ್ಯವಹಾರಗಳ ಸಂಘಟನೆ ಪ್ರಕಟಿಸಿದೆ. ಆದರೆ ಅವರಲ್ಲಿ 17 ಜನರನ್ನು ಮಾತ್ರ ಗುರುತಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಅಲ್ ಮಂಗಾಫ್ ಕಟ್ಟಡದ ಬೆಂಕಿಯಲ್ಲಿ ಒಟ್ಟು 49 ಜನರು ಸಾವನ್ನಪ್ಪಿದ್ದು, ಅದರಲ್ಲಿ 42 ಭಾರತೀಯರು. ಉಳಿದವರಲ್ಲಿ ಪಾಕಿಸ್ತಾನಿ, ಫಿಲಿಪಿನೋ, ಈಜಿಪ್ಟ್ ಮತ್ತು ನೇಪಾಳಿಗಳು ಸೇರಿದ್ದಾರೆ. ‌

ಮೃತರಲ್ಲಿ ಕೇರಳದ ನಿವಾಸಿಗಳಲ್ಲದೆ, ತಮಿಳುನಾಡು ಮತ್ತು ಉತ್ತರಪ್ರದೇಶದವರೂ ಸೇರಿದ್ದಾರೆ. ಪ್ರಸ್ತುತ, 35 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ, ಅದರಲ್ಲಿ ಏಳು ಜನರ ಪರಿಸ್ಥಿತಿ ಗಂಭೀರವಾಗಿದೆ. ಕನಿಷ್ಠ ಐದು ಜನರು ವೆಂಟಿಲೇಟರ್ ಬೆಂಬಲದಲ್ಲಿರುವುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *