ಮಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಂಟು ಮಂದಿಯನ್ನು ಬಂಧಿಸುವ ಮೂಲಕ ಮಹತ್ವದ ಯಶಸ್ಸು ಸಾಧಿಸಿದ್ದಾರೆ.

ಶನಿವಾರ, ಮೇ 03 ರಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ, ಶಂಕಿತರನ್ನು ಮಂಗಳೂರು ಜಿಲ್ಲೆಯ ವಿವಿಧ ಭಾಗಗಳಿಂದ ವಶಕ್ಕೆ ಪಡೆಯಲಾಗಿದ್ದು, ಪ್ರಸ್ತುತ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ತಿಳಿಸಿದರು.
8 ಮಂದಿ ಆರೋಪಿಗಳು ಯಾರು?
ಸುಹಾಸ್ ಶೆಟ್ಟಿ ಕೇಸ್‌ನಲ್ಲಿ ಮೊದಲ ಆರೋಪಿ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮಹಮದ್ ರಿಜ್ವಾನ್ ಹಾಗೂ ಆದಿಲ್.
- ಅಬ್ದುಲ್ ಸಫ್ವಾನ್– 29 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು ಕೆಲಸ : ಡ್ರೈವರ್
- ನಿಯಾಜ್ – 25 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು
- ಮೊಹಮ್ಮದ್ ಮುಸ್ಸಾಮಿರ್ – 32 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ, ಮಂಗಳೂರು ಕೆಲಸ : ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್
- ಕಲಂದರ್ ಶಾಫಿ – 29 ವರ್ಷ ತಂದೆ : ಮಹಮ್ಮದ್ ವಾಸ : ಕುರ್ಸು ಗುಡ್ಡೆ, ಬಾಳ ಗ್ರಾಮ, ಮಂಗಳೂರು ಕೆಲಸ: ಸೇಲ್ಸ್ ಮ್ಯಾನ್ ಬೆಂಗಳೂರು
- ಆದಿಲ್ ಮೆಹರೂಪ್ – 27 ವರ್ಷ ವಾಸ : ಜಾಪ್ನಾ ಮಂಜಿಲ್, ಬಾಳ ಗ್ರಾಮ, ಮಂಗಳೂರು
- ನಾಗರಾಜ್ – 20 ವರ್ಷ ವಾಸ: ಕೋಟೆ ಹೊಳೆ, ಮಾವಿನಕೆರೆ ಗ್ರಾಮ ಚಿಕ್ಕಮಂಗಳೂರು ಜಿಲ್ಲೆ ಕೆಲಸ: ಶಾಮಿಯಾನ ಅಂಗಡಿಯಲ್ಲಿ ಕೆಲಸ
- ಮೊಹಮದ್ ರಿಜ್ವಾನ್ – 28 ವರ್ಷ ವಾಸ: ಜೋಕಟ್ಟೆ, ತೋಕುರು ಗ್ರಾಮ, ಮಂಗಳೂರು
- ರಂಜಿತ್ ವಾಸ: ರುದ್ರ ಪಾದ, ಕಳಸ, ಚಿಕ್ಕಮಂಗಳೂರು ಕೆಲಸ: ಡ್ರೈವಿಂಗ್
ಪೊಲೀಸರು ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದರು. ಘಟನೆಯ ನಿರ್ಣಾಯಕ ವೀಡಿಯೊ ದೃಶ್ಯಾವಳಿಗಳು ಶಂಕಿತರನ್ನು ಗುರುತಿಸಿ ಟ್ರ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ವರದಿಯಾಗಿದೆ.
ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.
Leave a Reply