ಶಿವಮೊಗ್ಗ: ಕ್ರಿಕೆಟ್ ವಿಚಾರವಾಗಿ ನಡೆದ ಗಲಾಟೆಯಿಂದಾಗಿ ಓರ್ವನ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕೊಲೆಯಾದ ಯುವಕನನ್ನು ಅರುಣ್ ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಯುವಕರ ತಂಡ ಕ್ರಿಕೆಟ್ ಆಡುವಾಗ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಜಗಳವಾಡಿಕೊಂಡಿದ್ದಾರೆ.
ವಿಷಯ ಆಟದ ಮೈದಾನದಲ್ಲೇ ಮುಗಿದಿದ್ದರೂ ಕೂಡ ಒಂದು ಗುಂಪು ಪುನಃ ರಾತ್ರಿ ವೇಳೆ ಮಾತನಾಡಬೇಕು ಎಂದು ಕರೆಯಿಸಿಕೊಂಡು ತಗಾದೆ ತೆಗೆದಿದ್ದು, ಅರುಣ್ ಹಾಗೂ ಸಂಜಯ್ ಎನ್ನುವವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಗಲಾಟೆ ತಾರಕಕ್ಕೇರಿ ಭರ್ಚಿಯಿಂದ ಇರಿದಿದ್ದಾರೆ. ಈ ಹಿನ್ನೆಲೆ ಅರುಣ್ ಮೃತಪಟ್ಟರೆ, ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು, ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸ್.ಪಿ ಮಿಥುನ್ ಕುಮಾರ್ ಜಿ.ಕೆ. ತಿಳಿಸಿದ್ದಾರೆ.
Leave a Reply