ಐಪಿಎಲ್ 2025 ಟೂರ್ನಮೆಂಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಈ ಕುರಿತು ಔಪಚಾರಿಕ ಘೋಷಣೆ ಹೊರಬೀಳುವ ನಿರೀಕ್ಷೆಯ ಇದೆ.
ಗುರುವಾರದಂದು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ದೆಹಲಿ ಕ್ಯಾಪಿಟಲ್ಸ್ (ಡಿಸಿ) ನಡುವಿನ ಪಂದ್ಯವನ್ನು ಐಪಿಎಲ್ ಮೊದಲ ಇನ್ನಿಂಗ್ಸ್‌ನ ಮಧ್ಯದಲ್ಲಿ ಕೈಬಿಡಲು ನಿರ್ಧರಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಧರ್ಮಶಾಲೆಯ ವಿಮಾನ ನಿಲ್ದಾಣ ಮತ್ತು ಸಮೀಪದ ಪ್ರದೇಶಗಳ ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿರುವ ಕಾರಣ, ಪಿಬಿಕೆಎಸ್ ಮತ್ತು ಡಿಸಿ ತಂಡದ ಆಟಗಾರರು ಹಾಗೂ ಸಿಬ್ಬಂದಿಯನ್ನು ಶುಕ್ರವಾರ ಬೆಳಿಗ್ಗೆ ಐಪಿಎಲ್ ಆಯೋಜಿಸಿದ ವಿಶೇಷ ರೈಲಿನ ಮೂಲಕ ದೆಹಲಿಗೆ ಕೊಂಡೊಯ್ಯಲಾಯಿತು.
ಐಪಿಎಲ್ 2025 ಈಗ 58 ಪಂದ್ಯಗಳನ್ನು ಪೂರ್ಣಗೊಳಿಸಿದೆ, ಇದರಲ್ಲಿ ಧರ್ಮಶಾಲೆಯಲ್ಲಿ ಕೈಬಿಡಲಾದ ಪಂದ್ಯವೂ ಸೇರಿದೆ. ಗುಂಪು ಹಂತದಲ್ಲಿ ಇನ್ನೂ 12 ಪಂದ್ಯಗಳು ಬಾಕಿಯಿವೆ. ಇವು ಲಕ್ನೋ (2), ಹೈದರಾಬಾದ್, ಅಹಮದಾಬಾದ್ (3), ದೆಹಲಿ, ಚೆನ್ನೈ, ಬೆಂಗಳೂರು (2), ಮುಂಬೈ, ಜೈಪುರ್‌ನಲ್ಲಿ ನಡೆಯಲಿವೆ. ಇದಾದ ನಂತರ ಪ್ಲೇಆಫ್ ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಆಯೋಜನೆಗೊಳ್ಳಲಿವೆ.
ಮುಂದಿನ ವಿವರಗಳು ಶೀಘ್ರದಲ್ಲಿ…
Leave a Reply