ಮರವಂತೆ, ಮೇ.10: ಮರವಂತೆ ಕಡಲ ತೀರದಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಾಗಿದೆ.
10ರಂದು ಬೆಳಿಗ್ಗೆ ಗಂಗೊಳ್ಳಿ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಬಸವರಾಜ ಕನಶೆಟ್ಟಿ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮರವಂತೆ ಗ್ರಾಮದ ಮರವಂತೆ ಬೀಚ್ ಬಳಿ ಇಬ್ಬರು ಯುವಕರು ಗಾಂಜಾ ಸೇವಿಸುತ್ತಿರುವುದಾಗಿ ಮಾಹಿತಿ ಬಂದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಇಬ್ಬರೂ ಯುವಕರು ತೊದಲುತ್ತಾ ಮಾತನಾಡುತ್ತಿದ್ದು, ಅಮಲಿನಲ್ಲಿರುವುದು ಕಂಡುಬಂದಿದೆ.
ಶರ್ಪುದ್ದೀನ್ (22ವ), ಮಹಮ್ಮದ್ ಸುಹೇಬ್ (21ವ) ಈ ಯುವಕರು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿದ್ದು ಅವರನ್ನು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Reply