ಮೆಟ್ರೋ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ತುಮಕೂರಿನ ಜನರಿಗೆ ನಮ್ಮ ಮೆಟ್ರೋ ಕಡೆಯಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಬೆಂಗಳೂರಿನ ಅವಿಭಾಜ್ಯ ಸಾರಿಗೆ ಸಂಸ್ಥೆಯಾಗಿರುವ ನಮ್ಮ ಮೆಟ್ರೋ ಮೊಟ್ಟ ಮೊದಲ ಸಲ ಅಂತರ ಜಿಲ್ಲೆ ಸಂಚಾರ ಆರಂಭಿಸುವ ಸುದ್ದಿ ಹೊರಬಿದ್ದಿದೆ.
ಬೆಂಗಳೂರು ಟು ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಚಿಂತನೆ ನಡೆದಿದ್ದು, ಈಗಾಗಲೇ ಬಿಎಂಆರ್ಸಿಎಲ್ ಕಡೆಯಿಂದ ಕಾರ್ಯಾಸಾಧ್ಯತೆ ವರದಿ ಸಿದ್ಧವಾಗಿ ಸರ್ಕಾರಕ್ಕೂ ಸಲ್ಲಿಕೆಯಾಗಿದೆ. ಈಗಾಗಲೇ ಮೆಟ್ರೋ ಹಸಿರು ಮಾರ್ಗದಲ್ಲಿ ರೇಷ್ಮೇ ಸಂಸ್ಥೆಯಿಂದ ಮಾಧಾವರವರೆಗೂ ಕಾರ್ಯಾಚರಣೆ ಮಾಡ್ತಿದ್ದು, ನೆಲಮಂಗಲಕ್ಕೆ ವಿಸ್ತರಣೆ ಮಾಡುವ ಬಗ್ಗೆ ಪ್ರಸ್ತಾವನೆ ಇತ್ತು.
ನೆಲಮಂಗಲ ದಾಟಿ ತುಮಕೂರು ಜಿಲ್ಲೆಗೂ ನಮ್ಮ ಮೆಟ್ರೋ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದ್ದು, ಶಿರಾ ಗೇಟ್ ವರೆಗೂ ಮೆಟ್ರೋ ಮಾಡುವ ಕುರಿತು ರಿಪೋರ್ಟ್ ಸಿದ್ಧವಾಗಿದೆ. ಸದ್ಯ ಈ ರಿಪೋರ್ಟ್ ನಲ್ಲಿ ಬೆಂಗಳೂರಿನಿಂದ ತುಮಕೂರು ಮಾರ್ಗದಲ್ಲಿ 58 ಕಿ.ಮೀಟರ್ ಯೋಜನೆ ಹೊಂದಿದ್ದು, ಒಟ್ಟು 25 ಎತ್ತರದ ಮೆಟ್ರೋ ನಿಲ್ದಾಣಗಳನ್ನ ಗುರುತು ಮಾಡಲಾಗಿದೆಯಂತೆ.
ಬೆಂಗಳೂರು ಟು ತುಮಕೂರು ಮೆಟ್ರೋ ವಿಸ್ತರಣೆ ಯೋಜನೆ ಬಗ್ಗೆ ಜನಸಾಮಾನ್ಯರು ಅಚ್ಚರಿ ಮತ್ತು ಖುಷಿ ಎರಡೂ ವ್ಯಕ್ತಪಡಿಸ್ತಿದ್ದಾರೆ. ತುಮಕೂರಿನ ಮಂದಿ ಮೆಟ್ರೊ ಬರಲಿ ಬಿಡಿ ಅಂತಿದ್ರೆ, ಇನ್ನು ಕೆಲವ್ರು ಮೊದಲು ಬೆಂಗಳೂರು ನಗರದಲ್ಲಿ ಮೆಟ್ರೋ ಕಂಪ್ಲೀಟ್ ಮಾಡೋಕೆ ಹೇಳಿ ಎನ್ನುತ್ತಿದ್ದಾರೆ.
ಬೆಂಗಳೂರು ಟು ತುಮಕೂರುವರೆಗಿನ ಮೆಟ್ರೋ ವಿಸ್ತರಣೆ ಪ್ರಸ್ತಾವನೆಗೆ ವಿರೋಧವೂ ವ್ಯಕ್ತವಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇದೊಂದು ಮೂರ್ಖತನದ ಐಡಿಯಾ, ಮೊದಲು ಬಾಕಿ ಉಳಿದಿರುವ ಮಾರ್ಗಗಳಲ್ಲಿ ಮೆಟ್ರೋ ಆರಂಭಿಸಿ ಎಂದು ಟೀಕಿಸಿದ್ರೆ, ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಈ ಸರ್ಕಾರಕ್ಕೆ ಸೂಕ್ತ ಬುದ್ದಿ ಹೇಳಬೇಕಾದ ಅನಿವಾರ್ಯತೆ ಇದೆ. ಬೆಂಗಳೂರು ಟು ತುಮಕೂರು ನಡುವೆ ಎಕ್ಸ್ ಪ್ರೆಸ್ ಬಸ್, ಎಕ್ಸ್‌ಪ್ರೆಸ್ ರೈಲು ಸಂಚಾರ ಇದೆ.
Leave a Reply