ಬೈಂದೂರು, ಮೇ 19: ಬೈಂದೂರು ತಾಲೂಕಿನ ನಂದನವನ ಗ್ರಾಮದ ಪರಿಚಯ ಹೋಟೆಲ್‌ನ ಕೊಠಡಿ ಸಂಖ್ಯೆ 101ರಲ್ಲಿ ವಾಸವಾಗಿದ್ದ ಮಾಲತಿ ಎಂಬ ಮಹಿಳೆಯ 10 ತೊಲೆ (100 ಗ್ರಾಂ) ಚಿನ್ನದ ಕರಿಮಣಿ ಸರವನ್ನು ಕಳ್ಳರು ಕದ್ದಿರುವ ಘಟನೆ ನಡೆದಿದೆ.
ಪಿರ್ಯಾದಿದಾರರಾದ ಉದಯ (36), ಬಿಜೂರು ಗ್ರಾಮ, ಬೈಂದೂರು ಇವರ ಹೆಂಡತಿಯ ಅಕ್ಕ, ಮೇ 8, 2025ರಂದು ಬೆಳಿಗ್ಗೆ 8:30ಕ್ಕೆ ತಮ್ಮ ತಾಯಿಯ ಮನೆಯಾದ ಬಿಜೂರಿನ ಹೊಳೆತೋಟಕ್ಕೆ ತೆರಳಿದ್ದರು. ಆಗ ಕೊಠಡಿಗೆ ಬೀಗ ಹಾಕದೇ ಬಾಗಿಲು ಮಾತ್ರ ಹಾಕಿ ಹೋಗಿದ್ದರು. ಮಧ್ಯಾಹ್ನ 3:30ಕ್ಕೆ ಮರಳಿ ಬಂದಾಗ ಕೊಠಡಿಯ ಬಾಗಿಲು ತೆರೆದಿರುವುದನ್ನು ಕಂಡು, ಒಳಗೆ ಪರಿಶೀಲಿಸಿದಾಗ ಕಪಾಟಿನಲ್ಲಿದ್ದ 100 ಗ್ರಾಂ ಚಿನ್ನದ ಕರಿಮಣಿ ಸರ ಕಾಣೆಯಾಗಿರುವುದು ಗೊತ್ತಾಯಿತು.
ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಅದೇ ಹೋಟೆಲ್‌ನ 2ನೇ ಮಹಡಿಯ ಕೊಠಡಿ ಸಂಖ್ಯೆ 201ರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಮಧ್ಯಾಹ್ನ 2:20ಕ್ಕೆ ಮಾಲತಿಯವರ ಕೊಠಡಿ ಸಂಖ್ಯೆ 101ಕ್ಕೆ ಪ್ರವೇಶಿಸಿ ಹೊರಬಂದಿರುವ ದೃಶ್ಯ ಕಂಡುಬಂದಿದೆ.
ಈ ಬಗ್ಗೆ ಉದಯಯವರು ನೀಡಿದ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2025, ಕಲಂ 305 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Leave a Reply