ಕೊಲ್ಲೂರಿನಲ್ಲಿ 80,000 ರೂ. ಮೌಲ್ಯದ ಚಿನ್ನ ಕಳವು
ಕೊಲ್ಲೂರು, ಮೇ 19, 2025: ಇಡೂರು ಕುಂಜ್ಞಾಡಿ ಗ್ರಾಮದ 60. ವರ್ಷದ ಮಹಿಳೆಯೊಬ್ಬರು ದಿನಾಂಕ 16-05-2025ರ ಸಂಜೆ 4:00 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದರು. 19-05-2025ರ ಬೆಳಿಗ್ಗೆ 8:30 ಗಂಟೆಗೆ ಮನೆಗೆ ವಾಪಸ್ ಬಂದು ತಪಾಸಿದಾಗ, ಅಡುಗೆ ಕೋಣೆಯ ರೂಮ್‌ನಲ್ಲಿ ಮನೆಯ ಸ್ವತ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು.
ಗೋದ್ ರೇಜ್‌ನಲ್ಲಿ ಇರಿಸಿದ್ದ 16 ಗ್ರಾಂ ತೂಕದ 2 ಚಿನ್ನದ ಬಳೆಗಳು ಮತ್ತು ದೇವರ ಚಿಲ್ಲರೆ ಹಣ ಕಳವಾಗಿತ್ತು. 16-05-2025ರ ಸಂಜೆ 4:00 ಗಂಟೆಯಿಂದ 19-05-2025ರ ಬೆಳಿಗ್ಗೆ 8:30 ಗಂಟೆಯವರೆಗಿನ ಅವಧಿಯಲ್ಲಿ ಕಳ್ಳರು ಹಂಚು ತೆಗೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದಾರೆ. ಕಳವಾದ ಸ್ವತ್ತಿನ ಅಂದಾಜು ಮೌಲ್ಯ 80,000 ರೂಪಾಯಿ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.
ಕಾಪುವಿನಲ್ಲಿ 3.84 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಕಾಪು, ಮೇ 19, 2025: ಪಡು ಗ್ರಾಮದ 74 ವರ್ಷದ ಮಹಿಳೆಯೊಬ್ಬರು 18-05-2025ರ ಮಧ್ಯಾಹ್ನ 3:30 ಗಂಟೆಗೆ ಮಗ ಮಗನ ಮನೆಯಲ್ಲಿ ಕಾರ್ಯಕ್ರಮಕ್ಕಾಗಿ ಮನೆಗೆ ಬೀಗ ಹಾಕಿ ತೆರಳಿ, ರಾತ್ರಿ ಅಲ್ಲಿ ಉಳಿದುಕೊಂಡಿದ್ದರು. 19-05-2025ರ ಬೆಳಿಗ್ಗೆ 8:30 ಗಂಟೆಗೆ ಮನೆಗೆ ವಾಪಸ್ ಬಂದು ನೋಡಿದಾಗ, ಕಳ್ಳರು ಬಾಗಿಲಿನ ಲಾಕ್ ಅನ್ನು ಮುರಿದು ಒಳನುಗ್ಗಿ, ಬೆಡ್‌ರೂಂ ಕಪಾಟಿನ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು.
ಪರ್ಸ್‌ನಲ್ಲಿ ಇದ್ದ 64 ಗ್ರಾಂ ತೂಕದ ಚಿನ್ನಾಭರಣಗಳು—2.5 ಪವನ್ ಮುತ್ತಿನ ಹಾರ, 2.5 ಪವನ್ ಬಳೆ, 1 ಪವನ್ ತೂಕದ 4 ಉಂಗುರುಗಳು, 0.5 ಪವನ್ ಕಿವಿಯೋಲೆ, 0.5 ಪವನ್ ಒಡೆಗೆ ಹೂ, 3 ಗ್ರಾಂ ಕಿವಿಯ ಟಿಕ್ಕಿ (3 ಜೊತೆ), 4 ಗ್ರಾಂ ಮಗುವಿನ ಚೈನ್, 1 ಗ್ರಾಂ ಕಿವಿಯ ರಿಂಗ್ (1 ಜೊತೆ)—ಕಳವಾಗಿವೆ. ಒಟ್ಟು ಮೌಲ್ಯ 3,84,000 ರೂಪಾಯಿ. ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.
Leave a Reply