ಹೆಬ್ರಿ, ಮೇ 20, 2025: ದಿನಾಂಕ 19-05-2025ರ ರಾತ್ರಿ, ಹೆಬ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು (ತನಿಖೆ) ಅಶೋಕ ಮಾಳಬಾಗಿ ಅವರಿಗೆ ಬೆಳ್ಳಂಜೆ ಗ್ರಾಮದ ತುಂಬೆಜಡ್ಡು ಎಂಬಲ್ಲಿ ಮೋಹನ್ ದಾಸ್ ಎಂಬವರ ಮನೆ ಪಕ್ಕದ ಕಟ್ಟಡದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಬಂದಿತ್ತು. ಇದರಂತೆ ಸಿಬ್ಬಂದಿಗಳ ಸಹಾಯದೊಂದಿಗೆ ಬೆಳಿಗ್ಗೆ ಜಾವದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಕಟ್ಟಡದಲ್ಲಿ ತೇಜಸ್, ಪ್ರಜ್ವಲ್ ಮತ್ತು ಪ್ರವೀಣ್ ಎಂಬವರು ಲಾಭದ ಉದ್ದೇಶದಿಂದ ಗಾಂಜಾ ಮಾರಾಟ ಹಾಗೂ ಸಂಘಟಿತವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಸ್ಥಳದಲ್ಲಿ 89,000 ರೂಪಾಯಿ ನಗದು, 8 ಮೊಬೈಲ್ ಫೋನ್‌ಗಳು, 7 ಎಟಿಎಂ ಕಾರ್ಡ್‌ಗಳು, 3 ಸಿಮ್ ಕಾರ್ಡ್‌ಗಳು, 2 ನೋಟ್ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾ ಸಿಕ್ಕಿದೆ.
ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2025, ಕಲಂ 112 BNS, ಕಲಂ 78 ಕೆಪಿ ಕಾಯ್ದೆ ಮತ್ತು 8(c), 20(b) NDPS ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
Leave a Reply