ಹೊಳೆಹೊನ್ನೂರು: ಹೇಮಣ್ಣ ಕೊಲೆ ಪ್ರಕರಣದ ಆರೋಪಿ ಮಂಜ ಎಂಬಾತನ ಕಾಲಿಗೆ ಹೊಳಲೂರು ಸಮೀಪ ಪೊಲೀಸರು ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೆ ಈತ ಹಲ್ಲೆಗೆ ಯತ್ನಿಸಿದ್ದ. ಆಗ ಗುಂಡು ಹಾರಿಸಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಲೆಮರೆಸಿಕೊಂಡಿದ್ದ ಮಂಜನ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು.
ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮಿಪತಿ ನೇತೃತ್ವದ ತಂಡ ಆತನನ್ನು ಬಂಧಿಸಲು ತೆರಳಿತ್ತು. ಆಗ ಮಂಜ ಪೊಲೀಸ್ ಸಿಬ್ಬಂದಿ ಪ್ರಕಾಶ್ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಲಕ್ಷ್ಮಿಪತಿ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈಚೆಗೆ ಹೊಳೆಹೊನ್ನೂರಿನ ಹೊಸಕೊಪ್ಪದ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಹೇಮಣ್ಣ ಎಂಬುವವರ ಹತ್ಯೆಯಾಗಿತ್ತು. ವಾಕಿಂಗ್‌ಗೆ ತೆರಳಿದ್ದ ಹೇಮಣ್ಣನ ಮೇಲೆ ದಾಳಿ ನಡೆಸಿ, ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಂಜ ಪ್ರಮುಖ ಆರೋಪಿಯಾಗಿದ್ದ ಆರೋಪಿಸಲಾಗಿದೆ.
Leave a Reply