ಕೋಟ, ಮೇ 21, 2025: ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಭಾರೀ ಮಳೆ ಮತ್ತು ರೆಡ್ ಅಲರ್ಟ್‌ನ ನಡುವೆ, ದಿನಾಂಕ 20/05/2025 ರಂದು ಸಂಜೆ 6:00 ಗಂಟೆಗೆ ನೀರಿನ ಒಡಗುವಿಕೆಯ ವಿವಾದದಿಂದ ಉಂಟಾದ ಜಗಳವು ಹಲ್ಲೆಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿ ಕೋಟ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಮೊದಲ ದೂರಿನ ಪ್ರಕಾರ, 48 ವರ್ಷದ ಮಹಿಳೆಯೊಬ್ಬರು ಕೆಲಸ ಮುಗಿಸಿ ಮನೆಗೆ ಬಂದಾಗ ರಸ್ತೆಯ ನೀರು ತಮ್ಮ ಅಂಗಳಕ್ಕೆ ಬರುತ್ತಿರುವುದನ್ನು ಕಂಡು, ಪಕ್ಕದ ಮನೆಯವರಾದ ಆರೋಪಿಗಳನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಆರೋಪಿಗಳಿಬ್ಬರು ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಲ್ಲದೇ, ಕೈಯಿಂದ ಮತ್ತು ಹಾರೆಯಿಂದ ದಾಳಿ ಮಾಡಿ, ದೂರುದಾರರು ಮತ್ತು ಅವರ ಗಂಡನಿಗೆ ರಕ್ತಗಾಯ ಉಂಟುಮಾಡಿದ್ದಾರೆ. ಆರೋಪಿಗಳು ದೂರುದಾರರ ಸಂಬಂಧಿಯನ್ನು ಕಂಡು ಸ್ಥಳದಿಂದ ಓಡಿಹೋಗಿದ್ದಾರೆ. ಗಾಯಾಳುಗಳನ್ನು ಕೋಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 102/2025, ಕಲಂ 115(2), 118(1), 74, 352, 351(2) ಜೊತೆಗೆ 3(5) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ದೂರಿನ ಪ್ರಕಾರ, 49 ವರ್ಷದ ಮಹಿಳೆಯೊಬ್ಬರ ಮನೆಗೆ ಮಳೆಯಿಂದ ನೀರು ಒಳಗೆ ಬರುತ್ತಿದ್ದು, ಅವರ ಗಂಡನು ತೋಡಿಗೆ ನೀರನ್ನು ಬಿಡಲು ಹಾರೆಯಿಂದ ಕೆರಸುತ್ತಿರುವಾಗ, ಆರೋಪಿಗಳಿಬ್ಬರು ತಡೆದು ಕೈಯಿಂದ ಹಲ್ಲೆ ಮಾಡಿದ್ದಾರೆ. ಆರೋಪಿಗಳು ಹಾರೆಯಿಂದ ದಾಳಿ ಮಾಡಲು ಯತ್ನಿಸಿದಾಗ, ಆಕಸ್ಮಿಕವಾಗಿ ಒಬ್ಬ ಆರೋಪಿಯ ಕೈಗೆ ತಾಗಿ ರಕ್ತಗಾಯವಾಗಿದೆ. ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ. ಈ ಘಟನೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2025, ಕಲಂ 126(2), 352, 351(2) ಜೊತೆಗೆ 3(5) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
Leave a Reply