ಕಾಸರಗೋಡು, ಮೇ 22: ಕಾಸರಗೋಡು, ಕಾನಗಾಡ್‌ನ ಮಾಣಿಕ್ಕೋಟ್‌ನಲ್ಲಿ ಇಂದು ಸಂಜೆ ನಡೆದ ದುರಂತ ಘಟನೆಯಲ್ಲಿ, ಒಂದು ಮಗು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದೆ. ಇನ್ನೊಂದು ಮಗು ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮಗುವನ್ನು ಪಳೇಕ್ಕಿಯ ಅಜೀಜ್ ಅವರ ಮಗ ಆಫಾಜ್ (9) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಹೈದರ್ ಅವರ ಮಗ ಅನ್ವರ್ (11) ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಣಿಕ್ಕೋಟ್‌ನ ಪಳೇಕ್ಕಿ ಮಸೀದಿ ಬಳಿಯ ಕೊಳದಲ್ಲಿ ಮಕ್ಕಳು ಸ್ನಾನ ಮಾಡುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಮಕ್ಕಳನ್ನು ನೀರಿನಿಂದ ಹೊರತೆಗೆದರೂ, ಆಫಾಜ್ ಆಗಲೇ ಸಾವನಪ್ಪಿದ್ದು. ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
Leave a Reply