ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡಿಜಿ & ಐಜಿಪಿ ಪ್ರಶಂಸನಾ ಪದಕ

ಉಡುಪಿ, ಮೇ 22: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 2024-25ನೇ ಸಾಲಿನ “DG & IGP Commendation Disc Award” ಪ್ರಶಂಸನಾ ಪದಕವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಕೆ, ಐಪಿಎಸ್ ರವರು ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಶ್ರೀ ಎಂ.ಎ. ಸಲೀಂ, ಐಪಿಎಸ್ ರವರಿಂದ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಯನ್ನು ಕೊರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ, ಪೊಲೀಸ್ ಸಮುದಾಯದ ಸಮಕ್ಷಮ ಡಾ. ಅರುಣ್ ಕುಮಾರ್ ಅವರ ಅಸಾಧಾರಣ ನಾಯಕತ್ವ ಮತ್ತು ಸೇವೆಗಾಗಿ ನೀಡಲಾಯಿತು.

Comments

Leave a Reply

Your email address will not be published. Required fields are marked *