ಬೈಂದೂರು, ಮೇ 23: ತಾಲೂಕಿನ ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ ಕೃಷಿ ತೋಟವನ್ನು ಹೊಂದಿರುವ ಮಸೂದ್ ಪಟೇಲ್ ಎಂಬವರ ಗೋಡೌನ್‌ನಿಂದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆ ಕಳವಾಗಿರುವ ಘಟನೆ ನಡೆದಿದೆ.
ಮಸೂದ್ ಪಟೇಲ್ ಅವರು ತಮ್ಮ ತೋಟದಲ್ಲಿ ಅಡಿಕೆ, ತೆಂಗು, ಹಲಸು, ಮಾವು, ರಬ್ಬರ್ ಮತ್ತು ಇತರ ಕೃಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ತೋಟ ಮತ್ತು ಗೋಡೌನ್‌ನ ನಿರ್ವಹಣೆಯನ್ನು ಸಂತೋಷ್ ನೋಡಿಕೊಳ್ಳುತ್ತಿದ್ದಾರೆ. ಈ ವರ್ಷದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ, ಕಪ್ಪು ಬಣ್ಣದ ಪ್ಲಾಸ್ಟಿಕ್‌ನಿಂದ ಮುಚ್ಚಿ ಗೋಡೌನ್‌ನಲ್ಲಿ ಇರಿಸಲಾಗಿತ್ತು.
ದಿನಾಂಕ 15/05/2025 ರಂದು ಸಂತೋಷ್ ತನ್ನ ಊರಾದ ಕಡಬಕ್ಕೆ ತೆರಳಿದ್ದರು. ದಿನಾಂಕ 22/05/2025 ರಂದು ಬೆಳಿಗ್ಗೆ 10 ಗಂಟೆಗೆ ಮಸೂದ್ ಪಟೇಲ್ ಗೋಡೌನ್‌ಗೆ ಭೇಟಿ ನೀಡಿದಾಗ, ಕಬ್ಬಿಣದ ಗ್ರಿಲ್ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದಿರುವುದು ಕಂಡುಬಂದಿತು. ಗೋಡೌನ್‌ನಲ್ಲಿದ್ದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಯಾರೋ ಕಳ್ಳರು ದಿನಾಂಕ 15/05/2025 ರಿಂದ 22/05/2025 ರ ಬೆಳಿಗ್ಗೆ 10 ಗಂಟೆಯ ನಡುವಿನ ಅವಧಿಯಲ್ಲಿ ಬೀಗ ಮುರಿದು ಕಳವು ಮಾಡಿದ್ದಾರೆ.
ಈ ಬಗ್ಗೆ ಮಸೂದ್ ಪಟೇಲ್ ನೀಡಿದ ದೂರಿನ ಆಧಾರದ ಮೇಲೆ, ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2025ರಡಿ ಕಲಂ 331(3), 331(4), ಮತ್ತು 305 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Leave a Reply