ಕಾರ್ಕಳ, ಮೇ 25, 2025: ಕಾರ್ಕಳ ತಾಲೂಕಿನ ಕೆದಿಂಜೆ ಗ್ರಾಮದ ಮಂಜರಪಲ್ಕೆಯ ಶೇಷಗಿರಿ ಎಂಬವರಿಗೆ ಸೇರಿದ ಕಟ್ಟಡದ ಪಕ್ಕದ ಅಂಗಡಿಗಳ ಶೆಡ್‌ನ ಹಿಂಭಾಗದಲ್ಲಿ ಕೆಲವು ವ್ಯಕ್ತಿಗಳು ಸಾರ್ವಜನಿಕರಿಂದ ತಮ್ಮ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟವಾಡಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಕೆದಿಂಜೆ-ನಂದಳಿಕೆ ಗ್ರಾಮದ ಬೀಟ್ ಕರ್ತವ್ಯದ ಸಿಬ್ಬಂದಿಯಿಂದ ಪಡೆದ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಂದರ್ ಅವರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಿನಾಂಕ 25/05/2025 ರಂದು ಮಧ್ಯಾಹ್ನ 1:45 ಗಂಟೆಗೆ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಆಪಾದಿತರಾದ ಸಾಜನ್ ಮತ್ತು ಅಜಿತ್ ಕುಮಾರ್ ಎಂಬಿವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ಬಳಿಯಿಂದ 2 ಖಾಲಿ ಕಾಗದದ ಹಾಳೆಗಳು, ಒಂದು ನಂಬರ್ ಬರೆದ ಕಾಗದದ ಹಾಳೆ, ಅಂಕಿಗಳನ್ನು ಬರೆಯಲು ಇಟ್ಟಿದ್ದ ಬಿಳಿ ಬಣ್ಣದ ಕಾಗದದ ಸಣ್ಣ ಸ್ಲಿಪ್‌ಗಳು, 2 ಪೆನ್‌ಗಳು, 2 ಪ್ಲಾಸ್ಟಿಕ್ ಕುರ್ಚಿಗಳು, ಒಂದು ಮರದ ಟೇಬಲ್ ಹಾಗೂ ಮಟ್ಕಾ ಜುಗಾರಿಗೆ ಬಳಸಲು ತಂದಿದ್ದ 2,930 ರೂಪಾಯಿ ನಗದನ್ನು ಮಹಜರು ಮೂಲಕ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 78(iii) KP Act & 112(1), R/w 3(5) ಭಾರತೀಯ ನ್ಯಾಯ ಸಂಹಿತೆ 2023 ರ ಅಡಿಯಲ್ಲಿ ಪ್ರಕರಣ ಸಂಖ್ಯೆ 72/2025 ರಂತೆ ದಾಖಲಿಸಲಾಗಿದೆ.
ತನಿಖೆ ಮುಂದುವರೆದಿದೆ.
Leave a Reply