ಗಂಗೊಳ್ಳಿ: ವಿದ್ಯಾರ್ಥಿಗಳಿಗೆ ಪುಸ್ತಕ, ಕಲಿಕಾ ಸಾಮಗ್ರಿಗಳ ವಿತರಣೆ

ಗಂಗೊಳ್ಳಿ, ಮೇ 26, 2025: ಸಮಾಜ ಸೇವಕ ಬೈಲುಮನೆ ಆನಂದ ಬಿಲ್ಲವ ಅವರಿಂದ ಗಂಗೊಳ್ಳಿಯ ಶ್ರೀ ಶಿರಸಿ ಅಮ್ಮನವರ ಸನ್ನಿಧಾನದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆನಂದ ಬಿಲ್ಲವ, “ದೇವರಲ್ಲಿನ ನಂಬಿಕೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಶಿಕ್ಷಣವು ಇತರರಿಗೆ ಸ್ಫೂರ್ತಿಯಾಗಲಿ,” ಎಂದು ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಿ. ಗೋಪಾಲ ಪೂಜಾರಿ, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ, ಮಾಜಿ ಪಂಚಾಯತ್ ಸದಸ್ಯ ನಾಗರಾಜ ಖಾರ್ವಿ ಹಾಗೂ ಶ್ರೀ ಮಹಂಕಾಳಿ ಕುಣಿತ ಭಜನಾ ಮಂಡಳಿಯ ಮುಖ್ಯಸ್ಥೆ ಜ್ಯೋತಿ ಖಾರ್ವಿ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *