ಬೆಂಗಳೂರು, ಮೇ 27, 2025: ಕರ್ನಾಟಕ ರಾಜ್ಯ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆಯಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ. ಈ ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಯೋಗ್ಯತಾ ಅಂಶಗಳು:
- ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು.
- ವಿದ್ಯಾರ್ಥಿಯು CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗಿರಬೇಕು.
- ಕ್ರೈಸ್ತರನ್ನು ಹೊರತುಪಡಿಸಿ, ಇತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
ಸಾಲದ ಮೊತ್ತ (ಗರಿಷ್ಠ ಮಿತಿ):
ಕೋರ್ಸ್ | ಗರಿಷ್ಠ ಸಾಲದ ಮೊತ್ತ (ರೂ) |
---|---|
MBBS, MD, MS | ₹5,00,000 |
BDS, MDS | ₹1,00,000 |
BAMS, BHMS, BNYS, BUMS | ₹50,000 |
BE, B.Tech, M.Tech, B.Arch, M.Arch | ₹50,000 |
MBA, MCA, LLB | ₹50,000 |
B.Sc. (Agriculture, Horticulture, etc.) | ₹50,000 |
Pharmacy (B.Pharma, M.Pharma, D.Pharma, Pharma.D) | ₹50,000 |
ಅಗತ್ಯ ದಾಖಲೆಗಳು:
- ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ ಪ್ರತಿ
- CET ಪ್ರವೇಶ ಪತ್ರ
- NEET ಪ್ರವೇಶ ಪತ್ರ
- SSLC/10ನೇ ತರಗತಿಯ ಅಂಕಪಟ್ಟಿ
- PUC/ಡಿಪ್ಲೋಮಾ ಅಂಕಪಟ್ಟಿ
- ಇಂಡೆಮ್ನಿಟೀ ಬಾಂಡ್ (Indemnity Bond)
- ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ
- ಪೋಷಕರ ಸ್ವಯಂ ಘೋಷಣೆ ಪತ್ರ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಮೇ 31, 2025
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
- ☎️ 6363604332 – NNO Mangalore Community Centre
- ☎️ 7259204123 – NNO Kundapura Community Centre
- ☎️ 9945167801 – NNO Karkala Community Centre
- ನಮ್ಮ ನಾಡ ಒಕ್ಕೂಟ ಕಾರ್ಕಳ ಪ್ರಕಟಣೆ
Leave a Reply