ಕಾರ್ಕಳ, 27 ಮೇ 2025: ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಕಾರ್ಕಳ-ಉಡುಪಿ ರಾಜ್ಯ ಹೆದ್ದಾರಿಯ ಜೋಡುರಸ್ತೆಯಿಂದ ಬೈಲೂರು ಮಾರ್ಗದವರೆಗಿನ ರಸ್ತೆಯ ಪ್ರಮುಖ ತಿರುವುಗಳು ಮತ್ತು ಒಡ್ಡುರಸ್ತೆಗಳಲ್ಲಿ ವಾಹನ ಸವಾರರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಕ್ಯಾಟ್ಸ್ ಐ (Cats Eye) ಗಳನ್ನು ಅಳವಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ರಸ್ತೆಯ ಇಕ್ಕೆಲದ ಡೀಪ್ ಟರ್ನಿಂಗ್ ಪಾಯಿಂಟ್‌ಗಳಲ್ಲಿ ಈ ಕ್ಯಾಟ್ಸ್ ಐ ಗಳನ್ನು ಸ್ಥಾಪಿಸಲಾಗಿದ್ದು, ರಾತ್ರಿಯ ಸಮಯದಲ್ಲಿ ವಾಹನ ಚಾಲಕರಿಗೆ ರಸ್ತೆಯ ಗೋಚರತೆಯನ್ನು ಹೆಚ್ಚಿಸಿ, ಸುರಕ್ಷಿತ ಚಾಲನೆಗೆ ಸಹಾಯಕವಾಗಲಿದೆ. ಈ ಕ್ರಮವು ರಸ್ತೆ ಸಂಚಾರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಒಂದು ಮಹತ್ವದ ಹೆಜ್ಜೆಯಾಗಿದೆ.
Leave a Reply