ಬಂಟ್ವಾಳ: ಇಬ್ಬರು ಯುವಕರ ಮೇಲೆ ತಲ್ವಾರ್ ದಾಳಿ: ಓರ್ವ ಮೃತ್ಯು

ಬಂಟ್ವಾಳ 27 ಮೇ 2025: ಇರಕೊಡಿಯೆಲ್ಲಿಯ ಕೋಲ್ತಮಜಲು ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ರಹೀಮ್ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಮರಳು ಅನ್ಲೋಡ್ ಮಾಡುತ್ತಿರುವಾಗ ಈ ದಾಳಿ ನಡೆದಿದೆ. ರಹೀಮ್ ಜೊತೆಗಿದ್ದ ಯುವಕ ಇಮ್ತಿಯಾಜ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಹೀಮ್ ಪಿಕಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕೋಲ್ತಮಜಲು ಮಸೀದಿಯ ಕಾರ್ಯದರ್ಶಿ ಎಂದು ಹೇಳಲಾಗುತ್ತಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *