ಉಡುಪಿ, ಜೂನ್ 01, 2025: ಶಿಕ್ಷಣ ಫೌಂಡೇಶನ್ ಮತ್ತು ಜಿಲ್ಲಾಡಳಿತ ಉಡುಪಿಯ ಸಹಯೋಗದೊಂದಿಗೆ ದಿನಾಂಕ 25-05-2025 ರಂದು ಜಿಲ್ಲಾ ಪಂಚಾಯತ್ ಉಡುಪಿಯಲ್ಲಿ ನಡೆದ ಅರಿವು ಕೇಂದ್ರ ಮೇಲ್ವಿಚಾರಕರ ವಾರ್ಷಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಕರ್ಜೆ ಅರಿವು ಕೇಂದ್ರ ಗ್ರಂಥಾಲಯಕ್ಕೆ ವಿಶೇಷ ಗೌರವ ಸಂದಿದೆ.
ಗ್ರಂಥಾಲಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕರ್ಜೆ ಅರಿವು ಕೇಂದ್ರದ ಕೊಡುಗೆಯನ್ನು ಗುರುತಿಸಿ, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪ್ರತೀಕ್ ಬಾಯಲ್ ಅವರು ಗೌರವ ಸ್ಮರಣಿಕೆಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕರ್ಜೆ ಅರಿವು ಕೇಂದ್ರದ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.
Leave a Reply