ಕೋಟ: ದಿನಾಂಕ 01/06/2025ರಂದು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರು (ತನಿಖೆ) ಸುಧಾಪ್ರಭು ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ, ಚಿತ್ರಪಾಡಿ ಗ್ರಾಮದ ಸಾಲಿಗ್ರಾಮ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿತ ವಿಜಯನನ್ನು ಕೃತ್ಯದಲ್ಲಿ ಕೈಗೊಂಡಿದ್ದಾರೆ.
ಪೊಲೀಸರು ಆರೋಪಿತನಿಂದ ರೂ. 1,400 ನಗದು, ಮಟ್ಕಾ ಸಂಖ್ಯೆ ಬರೆದ ಚೀಟಿ, ಜುಗಾರಿಗೆ ಬಳಸಿದ ಬಾಲ್‌ಪೆನ್ ಹಾಗೂ ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2025, ಕಲಂ 78 KP ಆಕ್ಟ್ ಮತ್ತು 112 BNS ರಂತೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
Leave a Reply