ಉಡುಪಿ: ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡುವ ಕುರಿತು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ದಿನಾಂಕ 17-08-2025ರ ಸರ್ಕಾರಿ ಆದೇಶದಂತೆ ತುಮಕೂರು, ದಾವಣಗೆರೆ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಪ್ಪಳ, ರಾಯಚೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಿಗೆ ನಾಮನಿರ್ದೇಶನ ಮಾಡಲಾದ ಸದಸ್ಯರ ಪಟ್ಟಿಯಲ್ಲಿ, ರಾಯಚೂರು ಜಿಲ್ಲೆಯ ಸದಸ್ಯರನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. ಜೊತೆಗೆ, ಮೈಸೂರು ಜಿಲ್ಲೆಯ ಒಬ್ಬ ಸದಸ್ಯರನ್ನು ಬದಲಾಯಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆರು ಸದಸ್ಯರನ್ನು ಮತ್ತು ಬೆಂಗಳೂರು ನಗರ ಜಿಲ್ಲೆಗೆ ಎಂಟು ಸದಸ್ಯರನ್ನು ಅಧಿಕಾರೇತರ ಸದಸ್ಯರನ್ನಾಗಿ ಸೀಮಿತಗೊಳಿಸಿ, ಸರ್ಕಾರಿ ಆದೇಶ ಹೊರಡಿಸುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಉಡುಪಿ ಜಿಲ್ಲೆಗೆ ನಾಮನಿರ್ದೇಶನಗೊಂಡ ಅಧಿಕಾರೇತರ ಸದಸ್ಯರ ಪಟ್ಟಿ ಈ ಕೆಳಗಿನಂತಿದೆ:
- ಶ್ರೀ ನಕ್ವಾ ಯಾಹ್ಯಾ ಸಾಹೇಬ್, ಕೊಡವೂರು, ಉಡುಪಿ
- ಶ್ರೀ ಮೊಹಮ್ಮದ್ ಮೌಲಾ, ಅಧ್ಯಕ್ಷರು, ಮುಸ್ಲಿಂ ಉಡುಪಿ ಜಿಲ್ಲಾ ಒಕ್ಕೂಟ
- ಶ್ರೀ ಯಾಸೀನ್ ಮಲ್ಪೆ, ಉಡುಪಿ
- ಶ್ರೀಮತಿ ಪ್ರಮೀಳಾ ಜತ್ತನ್, ಕೊರಂಗರಪಾಡಿ, ಉಡುಪಿ
- ಶ್ರೀ ಸೂರಜ್ ಜೈನ್, ಕುಕ್ಕಂದೂರು, ಕಾರ್ಕಳ
- ಶ್ರೀ ಶರ್ಫುದ್ದೀನ್ ಶೇಖ್, ಕಾಪು, ಉಡುಪಿ
Leave a Reply