ವಿಡಿಯೋ: ಶಿರಸಿಯಲ್ಲಿ ದನಕಳ್ಳರ ಬಂಧನ; ಐಷಾರಾಮಿ ವಾಹನದಲ್ಲಿ ಕೃತ್ಯ, ಸ್ಕಾರ್ಪಿಯೊ ವಶ

ಶಿರಸಿ, ಜೂನ್ 03, 2025: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯ ವತಿಯಿಂದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ದನಕಳ್ಳತನದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ಐಷಾರಾಮಿ ಕೆಂಪು ಬಣ್ಣದ ಸ್ಕಾರ್ಪಿಯೊ ವಾಹನವನ್ನು ಬಳಸಿ ದನಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ದಿನಾಂಕ 26/05/2025 ರಂದು ಶಿರಸಿ ಶಹರದ ವಿವೇಕಾನಂದ ನಗರದ ದೇವಕಾನ್ ಡೆವಲಪರ್ ಕಚೇರಿಯ ಮುಂಭಾಗದಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಹೋರಿ ಕರುವನ್ನು ಹಾಗೂ ಕೊಬಿಕೆರೆ ಗದ್ದೆ ಬಯಲಿನ ಖಾಲಿ ಜಾಗದಲ್ಲಿ 80,000 ರೂಪಾಯಿ ಮೌಲ್ಯದ ಕಂಟ್ರಿ ಜರ್ಸಿ ಆಕಳನ್ನು ಕೆಂಪು ಸ್ಕಾರ್ಪಿಯೊ ವಾಹನದಲ್ಲಿ ಹಿಂಸಾತ್ಮಕವಾಗಿ ಕಳವು ಮಾಡಿಕೊಂಡು ಹೋಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ:

  1. ಕ್ರಮ ಸಂಖ್ಯೆ 49/2025, ಕಲಂ 303(2) ಎನ್‌ಎಸ್-2023 ಮತ್ತು ಪ್ರಾಣಿ ಹಿಂಸೆ ನಿರ್ಮೂಲನಾ ಕಾಯ್ದೆ 1960, ಕಲಂ 11(1)(ಅ).
  2. ಕ್ರಮ ಸಂಖ್ಯೆ 852/2025, ಕಲಂ 305(2) ಎನ್‌ಎಸ್-2029.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ನಾರಾಯಣ ಎಂ. ಐ.ಪಿ.ಎಸ್‌ ರವರು ಆರೋಪಿಗಳು, ವಾಹನ ಹಾಗೂ ಕಳವಾದ ಜಾನುವಾರುಗಳನ್ನು ಪತ್ತೆಹಚ್ಚಲು ವಿಶೇಷ ತಂಡವೊಂದನ್ನು ರಚಿಸಿದ್ದರು. ಈ ತಂಡವು ಖಚಿತ ಮಾಹಿತಿಯ ಮೇರೆಗೆ ದಿನಾಂಕ 28/08/2038 ರಂದು ಬೆಳಗ್ಗೆ 8:00 ಗಂಟೆಗೆ ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸಮೀಪ ಕೆಂಪು ಸ್ಕಾರ್ಪಿಯೊ ವಾಹನವನ್ನು ತಡೆದು ತಪಾಸಣೆ ನಡೆಸಿತು. ಈ ವೇಳೆ ವಾಹನದಲ್ಲಿದ್ದ ಮೂವರು ಆರೋಪಿಗಳು ಓಡಿಹೋಗಲು ಯತ್ನಿಸಿದರಾದರೂ, ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಶಿರಸಿಯಲ್ಲಿ ದನಕಳ್ಳತನಕ್ಕಾಗಿ ಬಂದಿದ್ದುದಾಗಿಯೂ, ಈ ಹಿಂದಿನ ಕೃತ್ಯಗಳಿಗೆ ತಾವೇ ಜವಾಬ್ದಾರರು ಎಂದು ಒಪ್ಪಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ವಿವರ:

  1. ನದೀಮ್ ಅಹಮದ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ.
  2. ಅಬ್ದುಲ್ ಆಜೀಜ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ.
  3. ಇಮ್ರಾನ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ.

ವಶಪಡಿಸಿಕೊಂಡ ವಸ್ತುಗಳು:

  • ಕೆಂಪು ಬಣ್ಣದ ಸ್ಕಾರ್ಪಿಯೊ ವಾಹನ
  • ಎರಡು ಕತ್ತಿಗಳು
  • ಎರಡು ಹಗ್ಗಗಳು
  • ಮೂರು ಮೊಬೈಲ್ ಫೋನ್‌ಗಳು
  • 2,000 ರೂಪಾಯಿ ನಗದು
  • ಎರಡು ನಂಬರ್ ಪ್ಲೇಟ್‌ಗಳು

ತನಿಖೆಯಿಂದ ಆರೋಪಿಗಳು ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರು ಕಳ್ಳತನ ಮಾಡಿ ಹಣ ಸಂಪಾದನೆಗಾಗಿ ಸ್ಕಾರ್ಪಿಯೊ ವಾಹನ ಖರೀದಿಸಿ, ನಂಬರ್ ಪ್ಲೇಟ್ ಬದಲಾಯಿಸಿ ರಾತ್ರಿಯ ವೇಳೆಯಲ್ಲಿ ಕೃತ್ಯ ಎಸಗುತ್ತಿದ್ದರು ಎಂದು ತಿಳಿದುಬಂದಿದೆ. ಇತರ ಪ್ರಕರಣಗಳಲ್ಲಿ ಆರೋಪಿಗಳ ಭಾಗಿತ್ವದ ಬಗ್ಗೆ ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ.

ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ನಾರಾಯಣ ಎಂ. ಐ.ಪಿ.ಎಸ್‌, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಮತ್ತು ಶ್ರೀ ಜಗದೀಶ ಎಂ., ಶಿರಸಿ ಉಪಾಧೀಕ್ಷಕರಾದ ಶ್ರೀಮತಿ ಗೀತಾ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಎಚ್‌ಐ ಶ್ರೀ ಮಂಜುನಾಥ ಗೌಡ, ಶಿರಸಿ ವೃತ್ತ ನಿರೀಕ್ಷಕ ಶ್ರೀ ಶಶಿಕಾಂತ ವರ್ಮಾ, ಕಂಟ್ರೋಲ್ ರೂಮ್ ಪಿಐ ಸತೀಶ ಕುಮಾರ್ ಕೆ.ವಿ., ಶ್ರೀ ರಾಜಕುಮಾರ ಉಕ್ಕಡ, ಪಿಎಸ್‌ಐ (ತನಿಖೆ) ಕು. ರತ್ನಾ ಕುರಿ, ಪಿಎಸ್‌ಐ (ಕಾನೂನು) ಶ್ರೀ ಮಹಾಂತೇಶ ಕುಂಬಾರ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಹಾಂತೇಶ ಖಾರಕೇರ, ಪ್ರಶಾಂತ ಪಾವಸ್ಥರ, ರಾಮಯ್ಯ ಪೂಜಾರಿ, ಸಂದೀಪ ನಿಂಬಾಯಿ, ಅಶೋಕ ನಾಯ್ಡ, ಮಧುಕರ ಗಾಂವಕರ, ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಐಬನ ಕದಂ ಮತ್ತು ತನಿಖಾ ಸಹಾಯಕ ಮಾರುತಿ ಮಳಗಿ ರವರು ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *