ಶಂಕರನಾರಾಯಣ, ಜೂನ್ 8, 2025: ಕುಂದಾಪುರ ತಾಲೂಕಿನ ಕುಳುಂಜೆ ಗ್ರಾಮದ ಭರತಕಲ್ಲು ಎಂಬಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ದಿನಾಂಕ 06/06/2025ರಂದು ಸಂಜೆ 7:15 ಗಂಟೆಗೆ, ಪಿರ್ಯಾದಿದಾರರಾದ ಸಮರ್ ಮಾಲ್ (24, ಪಶ್ಚಿಮ ಬಂಗಾಳ) ರಾಜೇಶ್ ಮಾಲ್ ರವರೊಂದಿಗೆ ಕೆಲಸ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ರಾಜೇಶ್ ಮಾಲ್ ರವರು ಶುದ್ಧೀಕರಣ ಘಟಕದ ದಕ್ಷಿಣ ಬದಿಯ ಸಿಮೆಂಟ್ ಗೋಡೆಯ ಮೇಲೆ ಬೆಳಕಿಗಾಗಿ ಅಳವಡಿಸಲಾಗಿದ್ದ ಹ್ಯಾಲೊಜನ್ ಲೈಟ್‌ಗೆ ಆಕಸ್ಮಿಕವಾಗಿ ಸ್ಪರ್ಶಿಸಿದಾಗ ವಿದ್ಯುತ್ ಶಾಕ್‌ಗೆ ಒಳಗಾದರು. ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಆದರೆ, ರಾಜೇಶ್ ಮಾಲ್ ಲೈಟ್ ಕಂಬದ ಬಳಿ ಅಸ್ವಸ್ಥರಾಗಿ ನಿಂತಿದ್ದರು. ಪಿರ್ಯಾದಿದಾರರು ಮತ್ತು ಇತರ ಕಾರ್ಮಿಕರು ತಕ್ಷಣ ಸ್ಥಳಕ್ಕೆ ಧಾವಿಸಿ, ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಖಾತ್ರಿಪಡಿಸಿಕೊಂಡು, ರಾಜೇಶ್ ಮಾಲ್‌ರವರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದರು.
ಘಟನೆಯನ್ನು ಸೈಟ್ ಇಂಜಿನಿಯರ್ ನಾಗರಾಜ್ ರವರ ಗಮನಕ್ಕೆ ತರಲಾಯಿತು. ರಾಜೇಶ್ ಮಾಲ್‌ರವರನ್ನು ಕಂಪನಿಯ ವಾಹನದಲ್ಲಿ ಹಾಲಾಡಿಯ ಶ್ರೀ ದುರ್ಗಾ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿನ ವೈದ್ಯರು ರಾಜೇಶ್ ಮಾಲ್‌ರವರನ್ನು ಪರೀಕ್ಷಿಸಿ, ಸಂಜೆ 7:30 ಗಂಟೆಗೆ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದರು.
ದೂರಿನ ಪಿರ್ಯಾದಿನ ಪ್ರಕಾರ, ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಸಲಕರಣೆಗಳನ್ನು ಒದಗಿಸದೆ, ಅಸುರಕ್ಷಿತವಾಗಿ ಕಬ್ಬಿಣದ ಕಂಬಕ್ಕೆ ವಿದ್ಯುತ್ ತಂತಿಯನ್ನು ಬೆಳಕಿಗಾಗಿ ಕಟ್ಟಲಾಗಿತ್ತು. ರಾಜೇಶ್ ಮಾಲ್ ಆ ಸ್ಥಳವನ್ನು ಸ್ಪರ್ಶಿಸಿದಾಗ ಕಂಬದಲ್ಲಿ ವಿದ್ಯುತ್ ಪ್ರವಹಿಸಿ, ಆತನಿಗೆ ವಿದ್ಯುತ್ ಶಾಕ್‌ಗೆ ಒಳಗಾಗಿ ಗಾಯಗೊಂಡು, ಆ ಗಾಯದಿಂದ ಮೃತಪಟ್ಟಿದ್ದಾರೆ. ಈ ಘಟನೆಗೆ ಸೈಟ್ ಇನ್‌ಚಾರ್ಜ್ ಇಂಜಿನಿಯರ್ ನಾಗರಾಜ್ ರವರ ನಿರ್ಲಕ್ಷ್ಯವೇ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2025, ಕಲಂ 106 BNS ರಂತೆ ಪ್ರಕರಣ ದಾಖಲಾಗಿದೆ.
Leave a Reply