ಕುಂದಾಪುರ, ಜೂನ್ 10, 2025: ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಒಬ್ಬ ಯುವತಿ (22) ಕಳೆದ ಒಂದು ವರ್ಷದಿಂದ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಜಂಕ್ಷನ್ ಬಳಿಯ ಹೆಲ್ತ್ ಕೇರ್ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ದಿನಾಂಕ 09/06/2025 ರಂದು ಬೆಳಿಗ್ಗೆ 11:30 ಗಂಟೆಗೆ, ಯುವತಿ ಕೆಲಸದಲ್ಲಿ ನಿರತರಾಗಿದ್ದಾಗ, ಯಾಸ್ಮಿನ್ ಎಂಬಾತರು ಮೆಡಿಕಲ್ ಶಾಪ್‌ಗೆ ಬಂದು ಸಿರ್ಲ್ಯಾಕ್ ಬೇಬಿ ಪೌಡರ್ ಕೇಳಿದ್ದಾರೆ.
ಯುವತಿ ವಸ್ತುವನ್ನು ಯಾಸ್ಮಿನ್‌ಗೆ ನೀಡಿ, 330 ರೂಪಾಯಿ ಪಾವತಿಸುವಂತೆ ಕೇಳಿದ್ದಾರೆ. ಯಾಸ್ಮಿನ್ 500 ರೂಪಾಯಿ ನೋಟು ನೀಡಿದಾಗ, ಯುವತಿ ಚಿಲ್ಲರೆ ಇಲ್ಲವೆಂದು ತಿಳಿಸಿ, ಪಕ್ಕದ ಅಂಗಡಿಯಿಂದ ಚಿಲ್ಲರೆ ತರಲು ಹೊರಗೆ ಹೋದರು. ಈ ವೇಳೆ ಯಾಸ್ಮಿನ್ ಯುವತಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ ಸಾರ್ವಜನಿಕವಾಗಿ ಅವಮಾನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯ ಬಗ್ಗೆ ಯುವತಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕೃ 34/2025, ಕಲಂ 352,115(2) BNS, 3(1)(R), 3(2)(VA) SC/ST ACT 03 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ಅಪ್ಡೇಟ್:


ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ವಿಷಯಕ್ಕಾಗಿ ಇಬ್ಬರು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದು ಆರೋಪಿ ಮಹಿಳೆಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸದರಿ ಪ್ರಕರಣದ ಸಂತ್ರಸ್ತೆ ಮಹಿಳೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಐಪಿಎಸ್ ರವರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.
ದಲಿತ ಮುಖಂಡರಿಂದ ಪೊಲೀಸ್ ಠಾಣೆಗೆ ಭೇಟಿ


Leave a Reply