ಕುಂದಾಪುರ: ಎರಡು ಮಕ್ಕಳ ತಾಯಿಯೊಬ್ಬಳು ನದಿಗೆ ಹಾರಿದ ನಾಟಕವಾಡಿದ ಯುವಕನೊಂದಿಗೆ ಪರಾರಿಯಾದ ಘಟನೆ ನಡೆದಿದೆ.
ಕುಂದಾಪುರ ಚರ್ಚ್ ರೋಡ್ನಿಂದ ಕೋಡಿಗೆ ಹೋಗುವ ಸೇತುವೆ ಬಳಿ ವಿಠಲವಾಡಿ ಮೂಲದ ಹೀನಾ ಕೌಸರ್(33) ಎಂಬಾಕೆ ಸ್ಕೂಟಿ ಹಾಗೂ ಚಪ್ಪಲಿ ಬಿಟ್ಟು ನದಿಗೆ ಹಾರಿದ ರೀತಿ ನಾಟಕವಾಡಿ ಹೆಮ್ಮಾಡಿಯ ಹೊಟೇಲ್ ಕಾರ್ಮಿಕ ಸಾಹಿಲ್ (27) ಎಂಬುವನ ಜೊತೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆಯ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು.
ಕುಂದಾಪುರ ಫುಡ್ ಮಾರ್ಕ್ ಎಂಬ ಹೋಟೇಲ್ ನಲ್ಲಿ ಯುವಕ ಕೆಲಸ ಮಾಡಿಕೊಂಡಿದ್ದು ಜೂ. 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಕುಂದಾಪುರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಸ್ಕೂಟಿಯಲ್ಲಿ ಹೋದವ ಇದುವರೆಗೆ ಬಾರದೆ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
Leave a Reply