ಮಲ್ಪೆ ಬೀಚ್ ನಲ್ಲಿ ಪಾನಿ ಪೂರಿ ಅಂಗಡಿಯವರ ಹಾಗೂ ಪ್ರವಾಸಿಗರ ನಡುವೆ ಹೊಡೆದಾಟ

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ಪಾನಿ ಪೂರಿ ಅಂಗಡಿಯವರ ಮತ್ತು ಪ್ರವಾಸಕ್ಕೆ ಬಂದ ಪ್ರವಾಸಿಗರ ನಡುವೆ ಜಗಳ ನಡೆದು ನಂತರ ಹೊಡೆದಾಟ ಸಂಭವಿಸಿದೆ.

ಈ ಘಟನೆ ಬಗ್ಗೆ ದೂರು ಪ್ರತಿದೂರು ದಾಖಲಾಗಿದೆ. ಮಲ್ಪೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಘಟನೆ ವಿವರ : ದಿನಾಂಕ : 10/06/2025ರಂದು ರಾತ್ರಿ 08:30 ಗಂಟೆಗೆ ಮಲ್ಪೆ ಬೀಚ್‌ ಬಳಿಯ ಪಾನಿ ಪೂರಿ ಅಂಗಡಿಯಲ್ಲಿ ಹೆಚ್ಚುವರಿಯಾಗಿ ಒಂದು ಪಾನಿ ಪೂರಿ ನೀಡುವ ವಿಷಯವಾಗಿ ಪ್ರವಾಸಕ್ಕೆ ಬಂದ ಮಂಡ್ಯ ಜಿಲ್ಲೆಯ ಪ್ರವಾಸಿಗರಿಗೆ ಮತ್ತು ಸ್ಥಳೀಯ ಪಾನಿ ಪುರಿ ಅಂಗಡಿಯವರಿಗೆ ಗಲಾಟೆಯಾಗಿ, ಬೈದಾಡಿಕೊಂಡಿದ್ದು, ಎರಡೂ ಕಡೆಯಿಂದ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ದೂರು ಪ್ರತಿದೂರು ನೀಡಲಾಗಿದ್ದು ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2025 ಕಲಂ: 189(2), 191(2), 191(3), 115(2), 118(1), 352, 351 (2) ಜೊತೆಗೆ 190 BNS ಮತ್ತು 72/2025, ಕಲಂ: 189(2),191(2), 191(3), 115(2), 118(1), 352, 351 (2) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಎರಡು ಪ್ರಕರಣಗಳು ಕೇಸ್‌ ಕೌಂಟರ್‌ ಕೇಸ್‌ ಆಗಿದ್ದು, ಮೊದಲ ಪ್ರಕರಣದ ಆರೋಪಿಗಳಾದ

  1. ಸುದೀಪ
  2. ಸಂಪತ್
  3. ಪುನೀತ
  4. ಮಹೇಶ
  5. ಕನ್ನ ವೈಜಿ
  6. ಅರವಿಂದ

ಹಾಗೂ ಎರಡನೇ ಪ್ರಕರಣದ ಆರೋಪಿಗಳಾದ

  1. ರಮೇಶ
  2. ಮೋನು
  3. ವಿನೋದ

ನನ್ನು ‌ದಸ್ತಗಿರಿ ಮಾಡಲಾಗಿರುತ್ತದೆ.

Comments

Leave a Reply

Your email address will not be published. Required fields are marked *