ಗಂಗೊಳ್ಳಿ: ಯಕ್ಷಾಭಿಮಾನಿ ರಕ್ತದಾನಿ ಬಳಗದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಗಂಗೊಳ್ಳಿ: ರಕ್ತದಾನ ಮಾಡುವುದು ಪುಣ್ಯದ ಕೆಲಸ. ನಾವು ನೀಡುವ ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು. ರಕ್ತ ದೇವರು ನಮಗೆ ನೀಡಿದ ಬೆಲೆ ಕಟ್ಟಲಾಗದ ಸಂಪತ್ತು. ರಕ್ತದ ಬೆಲೆ ಎಷ್ಟು ಎಂಬುದನ್ನು ರಕ್ತದ ಅವಶ್ಯಕತೆ ಇರುವ ಜನರಿಗೆ ತಿಳಿದಿದೆ. ಹೀಗಾಗಿ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ಜನರಲ್ಲಿ ರಕ್ತದಾನದ ಬಗ್ಗೆ ಇರುವ ಸಂಶಯಗಳನ್ನು ದೂರ ಮಾಡಬೇಕು ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಜಿ. ವೆಂಕಟೇಶ ಶೆಣೈ ಹೇಳಿದರು.

ಅವರು ಯಕ್ಷಾಭಿಮಾನಿ ರಕ್ತದಾನಿಗಳ ಬಳಗ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲ ಇವರ ಸಹಭಾಗಿತ್ವದೊಂದಿಗೆ 16ನೇ ವರ್ಷದ ಧರ್ಮಸ್ಥಳ ಪಾದಯಾತ್ರೆಯ ಪ್ರಯುಕ್ತ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಮಂಗಳವಾರ ಜರಗಿದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿಯ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್, ಪತ್ರಕರ್ತ ಬಿ. ರಾಘವೇಂದ್ರ ಪೈ, ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹಾಗೂ ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲದ ವೈದ್ಯೆ ಡಾ. ನಮಿತಾ ಶುಭ ಹಾರೈಸಿದರು.

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಗಂಗೊಳ್ಳಿ ಗ್ರಾಪಂ ಸದಸ್ಯ ಚಂದ್ರ ಖಾರ್ವಿ, ಪಾದಯಾತ್ರೆ ಬಳಗದ ಸಂಚಾಲಕ ರಾಮಚಂದ್ರ ಖಾರ್ವಿ, ಚರಣ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *