ಮರವಂತೆ ಬೀಚ್ ನ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ

ಮರವಂತೆ: ಸರ್ಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ) ತನ್ನ ವಾರ್ಷಿಕ ಅಧ್ಯಯನ ಭೇಟಿ ಸಂದರ್ಭದಲ್ಲಿ ಈ ಬಾರಿ ಉಡುಪಿ ಜಿಲ್ಲೆಯ ತ್ರಾಸಿ ಮರವಂತೆ ಬೀಚ್ ನ ಕಡಲ್ಕೊರೆತ ಪ್ರದೇಶಗಳಿಗೆ ಜೂನ್ 9ರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಂದರು ಪ್ರದೇಶದಲ್ಲಿ ಸಮುದ್ರ ಮತ್ತು ನದಿ ದಂಡೆಗೆ ಸಮಿತಿ ಭೇಟಿ ನೀಡಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿ ಕಡಲು ಮತ್ತು ನದಿ ಕೊರೆತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಕೊಡೇರಿ ಪ್ರದೇಶ ಎಡಮಾವಿನ ಹೊಳೆ ಮತ್ತು ಸಮುದ್ರ ಕೂಡು ಪ್ರದೇಶವಾಗಿದ್ದು ಸ್ಥಳೀಯ ಜನತೆ ಬಳಸುವ ಪುಟ್ಟ ಬಂದರೂ ಇದ್ದು ಕಡಲ್ಕೊರೆತ ಸಮಸ್ಯೆಯಿಂದ ಬಾಧಿತವಾಗಿದೆ ಎಂದು ಪರಿಸರದ ಜನ ತಿಳಿಸಿದರು.

ದಡದಿಂದ 5೦೦ ಮೀಟರ್ ಗೂ ಹೆಚ್ಚು ದೂರವಿದ್ದ ಸಮುದ್ರ ಕೆಲವೊಮ್ಮೆ 2೦೦ ಮೀಟರ್ ಗೂ ಕಡಿಮೆ ಅಂತರವನ್ನು ಹೊಂದಿದೆ. ಪ್ರತೀವರ್ಷ ಕಡಲು ತೀರವನ್ನು ನುಂಗುತ್ತಿದ್ದು ದಂಡೆಯ ಬಹಳಷ್ಟು ಭಾಗಕ್ಕೆ ತಡೆಗೋಡೆ ನಿರ್ಮಾಣ ಬಾಕಿ ಇದೆ. ಹಲವು ಬಾರಿ ಕಾಂಟ್ರಾಕ್ಟ್ ನೀಡಲಾಗಿದ್ದರೂ ಸೀಮಿತ ಪ್ರದೇಶದಲ್ಲಷ್ಟೆ ಬಂಡೆಹಾಸಿನ ತಡೆ ನಿರ್ಮಾಣ ವಾಗಿರುತ್ತದೆ ಎಂದು ಸ್ಥಳೀಯ ಮತ್ಸ್ಯೋದ್ಯಮಿ‌ ರಮೇಶ್ ಖಾರ್ವಿ ಸಮಿತಿ ಗೆ ವಿವರಿಸಿದರು. ಸಮುದ್ರ ಕ್ಕೆ ಸಮಾನಾಂತರ ವಾಗಿ ಬಹಳ ದೂರ ಸಾಗುವ ಎಡಮಾವಿನ ಹೊಳೆಯ ದಂಡೆಗಳು ನದಿಕೊರೆತಕ್ಕೊಳಗಾಗಿವೆ ಎಂದು ಅವರು ವಿವರಿಸಿದರು. ಮಧ್ಯಾಹ್ನದಿಂದ ಸಂಜೆವರೆಗೆ ಪೂರ್ತಿ ಪರಿಸರವನ್ನು ಪರಿಶೀಲನೆ ನಡೆಸಿ ಸರ್ಕಾರ ಈ ಬಗ್ಗೆ ಜಾಗೃತರಾಗುವಂತೆ ನಾವು ಒತ್ತಾಯಿಸುತ್ತೇವೆ ಎಂದು ಸಮಿತಿಯ ಸಂಸ್ಥಾಪಕರಾದ ಜಯಕೃಷ್ಣ ಎ. ಶೆಟ್ಟಿ ಪರಿಸರದ ಜನರಿಗೆ ಭರವಸೆಯನ್ನು ನೀಡಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ತಂಡದಲ್ಲಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ , ಕೋಶಾಧಿಕಾರಿ ಸದಾನಂದ ಆಚಾರ್ಯ, ಸಮಿತಿಯ ವಕ್ತಾರ ದಯಾಸಾಗರ್ ಚೌಟ, ಸಮಿತಿಯ ರಾಜ್ಯ ಸಂಯೋಜಕರಾದ ಕೆ. ಪಿ. ಜಗದೀಶ್ ಅಧಿಕಾರಿ, ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಮಾಜಿ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ, ನ್ಯಾ. ಆರ್. ಎಂ. ಭಂಡಾರಿ, ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್, ದೇವದಾಸ್ ಕುಲಾಲ್, ಸಿಎಸ್ ಗಣೇಶ್ ಶೆಟ್ಟಿ, ರಾಕೇಶ್ ಭಂಡಾರಿ, ಮಹೇಶ್ ಕಾರ್ಕಳ, ಸಮಿತಿಯ ಸದಸ್ಯರುಗಳಾದ ಪೆಲಿಕ್ಸ್ ಡಿ’ಸೋಜಾ ದಂಪತಿ., ತೋನ್ಸೆ ಅಶೋಕ್ ಎಸ್. ಶೆಟ್ಟಿ, ತುಳಸಿದಾಸ್ ಎಲ್. ಅಮೀನ್, ನ್ಯಾ. ದಯಾನಂದ ಶೆಟ್ಟಿ, , ಚಿತ್ರಾಪು ಕೆ.ಎಂ. ಕೋಟ್ಯಾನ್, ಜಿಲ್ಲಾ ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ದಿವಾಕರ್ ಪೊಸ್ರಾಲ್, ರವಿ ಮೆಂಡನ್, ಶೇಖರ ಗುಜ್ಜರಬೆಟ್ಟು, ಪ್ರತಾಪ್ ಕೋಟ್ಯಾನ್, ರವಿರಾಜ್ ಕಲ್ಯಾಣ್ಪುರ್, ನಿರಂಜನ್ ಕರ್ಕೇರ, ನಾಗೇಶ್ ಶೆಟ್ಟಿ ಮಣಿ ಗುತ್ತು, ಜಯಪ್ರಕಾಶ್ ಹೆಗ್ಡೆ, ನ್ಯಾ. ಗುಣಕರ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *