ಗಂಗೊಳ್ಳಿ: ಸ್ಕೂಟರ್‌-ಜೀಪ್‌ ಡಿಕ್ಕಿ, ಸ್ಕೂಟರ್‌ ಸವಾರನಿಗೆ ಗಾಯ

ಗಂಗೊಳ್ಳಿ: ಕೇರಳದ ಕೋಜಿಕ್ಕೋಡ್‌ ಜಿಲ್ಲೆಯ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿರ್ಯಾದಿದಾರ ಪ್ರಕಾಶ್‌ (48) ತಮ್ಮ ಇಲಾಖಾ ಜೀಪ್‌ನಲ್ಲಿ ಆರೋಪಿಯೊಬ್ಬನನ್ನು ಪತ್ತೆಮಾಡಿ ಮುಂಬೈಯಿಂದ ಕೋಜಿಕ್ಕೋಡ್‌ಗೆ ಎಸ್ಕಾರ್ಟ್‌ ಮಾಡಿಕೊಂಡು ತೆರಳುತ್ತಿದ್ದರು. ದಿನಾಂಕ 10/06/2025 ರಂದು ಮಧ್ಯಾಹ್ನ 12:05 ಗಂಟೆಗೆ ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮರವಂತೆ ಬಳಿ ತೆರಳುವಾಗ, ಸ್ಕೂಟರ್‌ ಸವಾರನೊಬ್ಬ ರಸ್ತೆಯ ತೀರಾ ಬಲಬದಿಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಸ್ಕೂಟರ್‌ ಚಲಾಯಿಸಿಕೊಂಡು ಬಂದು ಇಲಾಖಾ ಜೀಪ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಿಂದ ಸ್ಕೂಟರ್‌ ಚಾಲಕ ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ.

ಗಾಯಗೊಂಡ ಸ್ಕೂಟರ್‌ ಸವಾರನನ್ನು ಕೂಡಲೇ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಘಟನೆ ಸಂಬಂಧ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025ರಡಿಯಲ್ಲಿ ಕಲಂ 281, 125(A) BNS ರಂತೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *