ಬೈಂದೂರು: ರವಿವಾರ ರಾತ್ರಿ ಬೀಸಿದ ಭೀಕರ ಗಾಳಿಗೆ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಡುವರಿ ಸಮೀಪದ ತಾರಾಪತಿ ತುಂಡ್ಲಿತ್ತು ದಿ.ಗಂಗೆ ಪೂಜಾರಿ ಅವರ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.
ರಾತ್ರಿ ಊಟ ಮಾಡಿ ಮಲಗಿದ ಸಂದರ್ಭ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಮನೆಯ ಮೇಲ್ಛಾವಣಿ ಸೀಟುಗಳು ಹಾರಿ ಹೋಗಿ ದೂರ ಬಿದ್ದಿದೆ. ಮಳೆಯ ನೀರು ಮನೆಯ ಒಳಗೆ ಬರುತ್ತಿದೆ. ದೊಡ್ಡ ಪ್ರಮಾಣದ ಹಾನಿಯಾಗಿದ್ದು ಸಾಕಷ್ಟು ನಷ್ಟ ಸಂಭವಿಸಿದೆ.
Leave a Reply