ಮಲ್ಪೆ, ಜೂನ್ 30, 2025: ಮೂಡುತೋನ್ಸೆ ಗ್ರಾಮದ ಕಲ್ಯಾಣಪುರ ಮೂಡುಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಕೋಳಿಅಂಕ ನಡೆಸುತ್ತಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಿಲ್ ಕುಮಾರ್ ಡಿ. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಿನಾಂಕ 29/06/2025 ರಂದು ದಾಳಿ ನಡೆಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಹೆಸರು ಸುದೀಪ್ ಎಂದು ತಿಳಿಸಿದ್ದಾನೆ. ಪರಾರಿಯಾದವರ ಬಗ್ಗೆ ವಿಚಾರಿಸಿದಾಗ, 1) ಉದಯ ಕೆಮ್ಮಣ್ಣು, 2) ಮಂಜುನಾಥ ಗರಡಿಮಜಲು, 3) ಕಾರ್ತಿಕ್ ಕೊಡವೂರು, 4) ಸುಕೇತ್ ಗರಡಿಮಜಲು, 5) ಸಂದೇಶ ಲಕ್ಷ್ಮೀನಗರ, 6) ಸುಜಿತ್ ಮೂಳೂರು ಎಂದು ಗುರುತಿಸಲಾಗಿದೆ.
ಪೊಲೀಸರು ಸ್ಥಳದಿಂದ ಕೋಳಿಯ ಕಾಲಿಗೆ ಕಟ್ಟಿದ ಬಾಳು (ಕತ್ತಿ), 860 ರೂಪಾಯಿ ನಗದು, ಒಂದು ಜೀವಂತ ಹುಂಜ ಕೋಳಿ ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2025ರ ಅಡಿಯಲ್ಲಿ ಕಲಂ 112 BNS, ಕಲಂ 87, 93 ಕೆಪಿ ಆಕ್ಟ್ ಮತ್ತು 11(1)(A) ಪ್ರಾಣಿ ಹಿಂಸೆ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
Leave a Reply