ಬೆಂಗಳೂರು, ಜೂನ್ 30, 2025: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ ಸಭೆಯು,ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ಮತ್ತು ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ ಆರ್ ನಗರ ರವರುಗಳ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಲ್ಪಸಂಖ್ಯಾತ ಮುಸ್ಲಿಮರ ವಿರೋಧಿ ಹೇಳಿಕೆ ನೀಡಿದ್ದು, ಇದನ್ನು ವಿರೋಧಿಸಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹೋರಾಟ ಪ್ರತಿಭಟನೆ ಮಾಡಿದರೂ ಸಹ, ಮುಸ್ಲಿಮರ ವೋಟು ಪಡೆದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಕನಿಷ್ಠ ಖಂಡಿಸಿಲ್ಲ ಮತ್ತು ಶಾಸಕನ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ, ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದ ದ್ರೋಹವಾಗಿದೆ.
ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳು ಒಂದಾಗಿ ರಾಜಕೀಯ ಅಧಿಕಾರ ಪಡೆದರೆ ಮಾತ್ರ ಗೌರವಯುತವಾಗಿ ಜೀವಿಸಲು ಸಾಧ್ಯವಾಗಿದೆ. ಇದಕ್ಕಾಗಿ ಅವಿರತ ಶ್ರಮದ ಅಗತ್ಯವಿದೆ. .
ಹಸಿವು ಮುಕ್ತ ಸ್ವಾತಂತ್ರ, ಭಯ ಮುಕ್ತ ಸ್ವಾತಂತ್ರ ದ್ಯೇಯದೊಂದಿಗೆ ಕಾರ್ಯನಿರ್ವಹಿಸುವ ನಾವು ಜನಪರ ಹೋರಾಟ,ಪ್ರತಿಭಟನೆ, ಆಂದೋಲನಗಳ ಜೊತೆಗೆ ಚುನಾವಣೆಗಳು ಕೂಡ ನಮ್ಮ ಮುಖ್ಯ ಧ್ಯೇಯವಾಗಿರಬೇಕು. ಹೋರಾಟ, ಪ್ರತಿಭಟನೆ, ಮತ್ತು ಜನಾಂದೋಲನ ಮೂಲಕ ವಂಚಿತರ ಹಕ್ಕುಗಳನ್ನು ತಕ್ಕಮಟ್ಟಿಗೆ ಕೊಡಿಸಬಹುದಾಗಿದೆ ಆದರೆ ರಾಜಕೀಯ ಪ್ರತಿನಿಧಿತ್ವದಿಂದ ಅದನ್ನು ಸುಲಭಗೊಳಿಸಬಹುದಾಗಿದೆ. ಆದ್ದರಿಂದ
ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ನಗರಡಾಳಿತಗಳ ಚುನಾವಣೆಗಳು ನಮ್ಮ ಗುರಿಯಾಗಿರಬೇಕು. ಈ ನಿಟ್ಟಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ ನಡೆಯಬೇಕು, ಪಕ್ಷದ ನಾಯಕರು ತಳಮಟ್ಟದಲ್ಲಿ ಮತ್ತು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಈ ಎಂದು ಕರೆ ಕೊಟ್ಟರು.
ದಕ್ಷಿಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Leave a Reply