ಭಟ್ಕಳ, ಜುಲೈ 01, 2025: ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ನೀರಗದ್ದೆ ಗುಡ್ಡದ ಮೇಲೆ ದುಷ್ಕರ್ಮಿಗಳು ಗೋವೊಂದನ್ನು ಕಳ್ಳತನ ಮಾಡಿ ವಧಿಸಿ, ತಲೆಯನ್ನು ಕತ್ತರಿಸಿ ಬಿಸಾಡಿದ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.
ಮುಂಡಳ್ಳಿಯ ಸತ್ಯನಾರಾಯಣ ನಗರದ ನಿವಾಸಿ ಹೊನ್ನಪ್ಪ ಈರಯ್ಯ ನಾಯ್ಕರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಗೋವನ್ನು ಜೂನ್ 29ರಂದು ದುಷ್ಕರ್ಮಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆ ಗೋವನ್ನು ನೀರಗದ್ದೆಯ ಮಾರಕಲ್ಲ ಗದ್ದೆಯ ಖಾಲಿ ಜಮೀನಿನಲ್ಲಿ ವಧಿಸಿ, ತಲೆಯನ್ನು ಕತ್ತರಿಸಿ ಬಿಸಾಡಿ ಪರಾರಿಯಾಗಿದ್ದಾರೆ.
ಈ ಘಟನೆ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್‌ಐ ರನ್ನಗೌಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ. ಪೊಲೀಸ್ ನಿರೀಕ್ಷಕ ಮಂಜುನಾಥ ಎ ಲಿಂಗಾರೆಡ್ಡಿ ಅವರು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದ್ದಾರೆ.
ಈ ಘಟನೆಯಿಂದ ಕೋಪಗೊಂಡ ಹಿಂದೂ ಸಂಘಟನೆಗಳ ಪ್ರಮುಖರು ಗ್ರಾಮೀಣ ಠಾಣೆಗೆ ತೆರಳಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.
Leave a Reply