ಗಂಗೊಳ್ಳಿ, ಜುಲೈ 1, 2025: ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯ ಸಿಬ್ಬಂದಿ ಜಿ. ಗಂಗಾಧರ ಪೈ ಅವರನ್ನು ಗಂಗೊಳ್ಳಿ ಕೆನರಾ ಬ್ಯಾಂಕಿನ ವತಿಯಿಂದ ಸೋಮವಾರ ಬೀಳ್ಕೊಡಲಾಯಿತು.
ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯಲ್ಲಿ ಸೋಮವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ವಾಸು ದೇವಾಡಿಗ ಅವರ ಸೇವೆಯನ್ನು ಶ್ಲಾಘಿಸಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಬ್ಯಾಂಕಿನ ಅಧಿಕಾರಿ ಮಂಜುನಾಥ, ಬ್ಯಾಂಕ್ ಸಿಬ್ಬಂದಿ ರೇಷ್ಮಾ, ನಿವೃತ್ತ ಅಧಿಕಾರಿ ಅಶೋಕ ಜಿ.ವಿ., ಉದ್ಯಮಿ ದಿನಕರ ಶೆಟ್ಟಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ನಿವೃತ್ತ ಸಿಬ್ಬಂದಿ ರಾಜೀವ ಶೇರುಗಾರ್ ಮೊದಲಾದವರು ನಿವೃತ್ತರ ಸೇವೆಯನ್ನು ಸ್ಮರಿಸಿ ಅವರನ್ನು ಅಭಿನಂದಿಸಿದರು.
ಬ್ಯಾಂಕ್ ಕಟ್ಟಡ ಮಾಲೀಕ ಎಂ.ಜಿ.ಅಜಿತ್ ನಾಯಕ್, ಅಶ್ವಿತಾ ಜಿ.ಪೈ, ಪ್ರಿಯಾ ಪೈ, ದಿಯಾ ಪೈ, ಬ್ಯಾಂಕಿನ ಸಿಬ್ಬಂದಿಗಳು, ಹಿತೈಷಿಗಳು ಮತ್ತಿತರರು ಉಪಸ್ಥಿತರಿದ್ದರು.
Leave a Reply