ಕುಂದಾಪುರ, ಜುಲೈ 1, 2025: ಕರ್ನಾಟಕ ಸಂಘ ರತ್ನ ಹಾಗೂ ಭಾರತ ಸಂಘ ಸಿರಿ ಪ್ರಶಸ್ತಿ ಪುರಸ್ಕೃತ ಕುಂದಾಪುರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ೩೫ನೇ ವರ್ಷದ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕುಂದಾಪುರದ ಬಿ.ಆರ್ ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನೆರವೇರಿತು.
ಸಂಸ್ಥೆಯ ಅಧ್ಯಕ್ಷ ನಾಗರಾಜ್ ಖಾರ್ವಿ ಸಭಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ಪುರಸಭಾ ಸದಸ್ಯೆ ದೇವಕಿ ಪಿ ಸಣ್ಣಯ್ಯ, ಮಾಜಿ ಪುರಸಭಾ ಸದಸ್ಯ ಸತೀಶ್ ಶೆಟ್ಟಿಯವರು ಸಂಸ್ಥೆಯ ಕಾರ್ಯ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ರವಿನಾಥ್ ಶೆಣೈ, ಬಿ ಆರ್ ರಾಯರ ಹಿಂದೂ ಶಾಲೆಯ ಮುಖ್ಯೋಪಾಧ್ಯಾಯ ನಿಂಗಪ್ಪ ಎಂ. ಸಂಸ್ಥೆಯ ಕಾರ್ಯದರ್ಶಿ ಗಣೇಶ್ ನಾಯ್ಕ್ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಮಂಜುನಾಥ ಪೂಜಾರಿ, ಮನೋಹರ್ ಪುತ್ರನ್, ಗುರುಪ್ರಸಾದ್ ಖಾರ್ವಿ, ಧನಪಾಲ ಪುತ್ರನ್, ಶರತ್ ಎಸ್ ಖಾರ್ವಿ,ಗಣೇಶ ಆಚಾರ್, ಗಣಪತಿ ಖಾರ್ವಿ ಉದಯ ಮಾಣಿಮನೆ, ಸುರೇಶ್ ಪುತ್ರನ್, ಗಣೇಶ ಸಾಲಿಯಾನ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಶಿಕ್ಷಕರು ಭಾಗವಹಿಸಿದ್ದರು.
ಚೇತನ್ ದೇವಾಡಿಗ ಸ್ವಾಗತಿಸಿದರು, ಶೇಖರ್ ಜಿ ಖಾರ್ವಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Leave a Reply