ಉಡುಪಿ: ಕಿನ್ನಿಮುಲ್ಕಿಯ ಸಂದೇಶ್ (25) ಐರ್ಲೆಂಡ್ನ ಡಬ್ಲಿನ್ನಲ್ಲಿ ಎಂ.ಎಸ್. ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಿನಾಂಕ 30/06/2025ರಂದು ಸಂಜೆ 6:05ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ +3530120***** ಸಂಖ್ಯೆಯಿಂದ ಸಂದೇಶ್ಗೆ ಕರೆ ಮಾಡಿ, “ನಾನು ಭಾರತೀಯ ರಾಯಭಾರಿ ಕಚೇರಿಯಿಂದ ಮಾತನಾಡುತ್ತಿದ್ದೇನೆ. ನೀವು ಐರ್ಲೆಂಡ್ನಲ್ಲಿ ಸಲ್ಲಿಸಿದ IRP ಅರ್ಜಿಯಲ್ಲಿ ಜನ್ಮ ದಿನಾಂಕ ತಪ್ಪಾಗಿದೆ. ತಕ್ಷಣ ಸರಿಪಡಿಸದಿದ್ದರೆ, ನಿಮ್ಮ ಪಾಸ್ಪೋರ್ಟ್ನ್ನು YELLOW ಗ್ರೂಪ್ಗೆ ಸೇರಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾನೆ.
ಆರೋಪಿಯು ನೀಡಿದ rakeshcons.dublin@***.***.** ಇ-ಮೇಲ್ಗೆ ಸಂದೇಶ್ ತಮ್ಮ ಆಧಾರ್ ಕಾರ್ಡ್, ಜನ್ಮ ದಿನಾಂಕ ಪ್ರಮಾಣಪತ್ರ ಹಾಗೂ ಮತದಾರರ ಗುರುತಿನ ಚೀಟಿಯ ನಕಲುಗಳನ್ನು ಕಳುಹಿಸಿದ್ದಾರೆ. ಬಳಿಕ ಆರೋಪಿಯು, ಭದ್ರತೆಗಾಗಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲು ತಿಳಿಸಿ, “ಜನ್ಮ ದಿನಾಂಕ ಪರಿಶೀಲನೆಯ ನಂತರ ಹಣ ಹಿಂದಿರುಗಿಸಲಾಗುವುದು” ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಸಂದೇಶ್ ತಮ್ಮ ಪೇಟಿಎಂ ಖಾತೆಯಿಂದ ಆಕ್ಸಿಸ್ ಬ್ಯಾಂಕ್ ಖಾತೆಗೆ 58,533.07 ರೂ. ವರ್ಗಾಯಿಸಿದ್ದಾರೆ.
ಪೇಟಿಎಂ ಖಾತೆಯ ವರ್ಗಾವಣೆ ಮಿತಿ ಮುಗಿದ ಕಾರಣ, ಸಂದೇಶ್ ತಮ್ಮ ತಂದೆ ಶ್ರೀಕಾಂತ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಶ್ರೀಕಾಂತ್ ಕಿನ್ನಿಮುಲ್ಕಿಯ ವೀರಭದ್ರೇಶ್ವರ ದೇವಾಸ್ಥಾನದ ಹಿಂಭಾಗದ ನಿವಾಸಿಯಾಗಿದ್ದು, ತಮ್ಮ ಪೇಟಿಎಂ ಮತ್ತು ಗೂಗಲ್ ಪೇ ಖಾತೆಗಳಿಂದ ಆರೋಪಿಯ ಖಾತೆಗಳಿಗೆ ಕ್ರಮವಾಗಿ 33,588.11 ರೂ. ಮತ್ತು 67,075.64 ರೂ. ಸೇರಿ ಒಟ್ಟು 1,00,663.75 ರೂ. ವರ್ಗಾಯಿಸಿದ್ದಾರೆ.
ಆನಂತರ ಆರೋಪಿಯು ಮತ್ತೆ ಹೆಚ್ಚಿನ ಹಣ ಕೇಳಿದಾಗ, ಸಂದೇಶ್ಗೆ ಮೋಸದ ಅನುಮಾನ ಬಂದಿದೆ. ಆರೋಪಿಯು ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2025, ಕಲಂ 318(2) BNS, 66(D) IT ಆಕ್ಟ್ನಡಿ ಪ್ರಕರಣ ದಾಖಲಾಗಿದೆ.
Leave a Reply