ಹುಬ್ಬಳ್ಳಿ(ಧಾರವಾಡ): “ಮಹಿಳೆಯರ ನಂಬರ್ ಪಡೆದು ಅವರಿಗೆ ಅಸಭ್ಯ ಮೆಸ್ಸೇಜ್ ಮಾಡುತ್ತಿದ್ದ ಕೊರಿಯರ್ ಡೆಲಿವರಿ ಬಾಯ್ನನ್ನು ಬಂಧಿಸಲಾಗಿದೆ” ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, “ಮಹಿಳೆಯರಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದ ರಮೇಶ ರೆಡ್ಡಿ ಎಂಬಾತನನ್ನು ಗೋಕುಲ್ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೂ ಇಬ್ಬರು ಮಹಿಳೆಯರಿಗೆ ಮೆಸ್ಸೇಜ್ ಮಾಡಿ ಕಿರಿಕಿರಿ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಈ ಕುರಿತಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ಅಗತ್ಯ ಕಾನೂನು ಕ್ರಮ ಜರುಗಿಸಲಾಗಿದೆ” ಎಂದರು.
“ಕೊರಿಯರ್ ಡೆಲಿವರಿ ಮಾಡುವವರು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅದರಲ್ಲಿ ಒಂದು ಪರ್ಸೆಂಟ್ ಈ ತರಹ ಕೆಲಸ ಮಾಡುತ್ತಾರೆ. ಇದರಿಂದ ಇಡೀ ಕೊರಿಯರ್ ವೃತ್ತಿ ನಂಬಿಕೊಂಡವರಿಗೆ ಕೆಟ್ಟ ಅಭಿಪ್ರಾಯ ಬರುತ್ತದೆ. ಹೀಗಾಗಿ ಕಂಪನಿಯವರು ಕೆಲಸಕ್ಕೆ ತಗೆದುಕೊಳ್ಳುವವರ ಬಗ್ಗೆ ಗಮನ ಇಡಬೇಕು. ಒಂಟಿ ಮಹಿಳೆಯರು, ಹಿರಿಯ ನಾಗರಿಕರು, ಹೆಣ್ಣು ಮಕ್ಕಳು ಡೆಲಿವರಿ ತಗೆದುಕೊಳ್ಳುತ್ತಾರೆ. ಒಬ್ಬರು ಈ ರೀತಿ ಮಾಡಿದರೆ, ಒಳ್ಳೆ ಕೆಲಸ ಮಾಡುವವರಿಗೆ ಕೆಟ್ಟ ಹೆಸರು ಬರುತ್ತದೆ. ಡೆಲಿವರಿ ಕೊಡುವವರು ಅನುಮಾನಾಸ್ಪದವಾಗಿ ಕಂಡುಬಂದರೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು” ಎಂದು ಮನವಿ ಮಾಡಿದರು.
ರಮೇಶ್ ರೆಡ್ಡಿ ಎಂಬ ಯುವಕ ಕೊರಿಯರ್ ಡೆಲಿವರಿ ಮಾಡುವ ಕೆಲಸ ಮಾಡುತ್ತಿರುತ್ತಾನೆ. ಇಂಥಹದ್ದೇ ಅಂತ ಕಂಪನಿ ಯಾವುದು ಇಲ್ಲ. ಹೆಚ್ಚುವರಿ ಡೆಲಿವರಿ ಮಾಡಲು ಇದ್ದಾಗ ಇವನನ್ನು ಸಂಪರ್ಕಿಸಿ, ಇವಾನ ಮುಖಾಂತರ ಡೆಲಿವರಿ ಮಾಡಿಸಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಡೆಲಿವರಿ ಮಾಡಿದಾಗ ಹೆಣ್ಣುಮಕ್ಕಳು ವಸ್ತುಗಳನ್ನು ಸ್ವೀಕರಿಸುತ್ತಿದ್ದಾಗ, ಅವರ ನಂಬರ್ ತೆಗೆದುಕೊಂಡು ಅವರಿಗೆ ಹಾಯ್ ಬೇಬಿ, ಹೌ ಆರ್ ಯು, ಐ ವಾಂಟ್ ಟು ಮೀಟ್ ಯು ಅನ್ನುವ ರೀತಿಯಲ್ಲಿ ಮೆಸ್ಸೇಜ್ ಹಾಕುವ ಮುಖಾಂತರ ಹೆಣ್ಣು ಮಕ್ಕಳಿಗೆ ಕಿರಿಕಿರಿ ಮಾಡುತ್ತಿದ್ದ ಎನ್ನುವಂತದ್ದು ನಮ್ಮ ಗಮನಕ್ಕೆ ಕಂಡುಬಂತು. ನಾವು ಪರಿಶೀಲನೆ ಮಾಡಿದಂತಹ ಸಂದರ್ಭದಲ್ಲಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಇದೇ ರೀತಿ ತೊಂದರೆ ಕೊಟ್ಟಿರುವಂತದ್ದು ಕಂಡುಬಂತು. ಹೀಗಾಗಿ ಪ್ರತ್ಯೇಕ ಪ್ರಕರಣವನ್ನು ದಾಖಲು ಮಾಡಿಕೊಂಡು ಸಂಬಂಧಪಟ್ಟ ರಮೇಶ್ ರೆಡ್ಡಿ ಎಂಬ ವ್ಯಕ್ತಿ ವಿರುದ್ಧ ನಾವು ಅಗತ್ಯ ಕ್ರಮವನ್ನು ಕೈಗೊಂಡಿದ್ದೇವೆ- ಎನ್. ಶಶಿಕುಮಾರ್, ಹು-ಧಾ ಪೊಲೀಸ್ ಕಮಿಷನರ್.
Leave a Reply